Thursday, December 19, 2024

ಸಮೃದ್ಧಿ ಮಂಜುನಾಥ್ ಅಬ್ಬರದ ಪ್ರಚಾರ : ಮುಂದುವರಿದ ಮತ ಬೇಟೆ

ಬೆಂಗಳೂರು : ಕೋಲಾರದ ಮುಳಬಾಗಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆಯ ಬಳಿಕ ಫೀಲ್ಡ್ ಗೆ ಇಳಿದಿದ್ದು, ಇಂದು ಅಬ್ಬರದ ಪ್ರಚಾರ ಮುಂದುವರಿಸಿದರು.

ಭಾರೀ ಜನಸ್ತೋಮದ ಮಧ್ಯೆ ಮೆರವಣಿಗೆಯಲ್ಲಿ ಬಂದು ಸಮೃದ್ದಿ ಮಂಜುನಾಥ್ ಬುಧವಾರ ನಾಮಪತ್ರ ಸಲ್ಲಿಸಿದ್ದರು. ಗುರುವಾರ ದೂಲಪಲ್ಲಿ ಮತ್ತು ಎಮ್ಮೆನತ್ತ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರ ಜೊತೆಗೆ ಸಮೃದ್ಧಿ ಮಂಜುನಾಥ್ ಪ್ರಚಾರ ನಡೆಸಿದರು.

ಸಮೃದ್ಧಿ ಮಂಜುನಾಥ್ ಅವರನ್ನು ಗ್ರಾಮಗಳಲ್ಲಿ ಮಹಿಳೆಯರು ಕಳಶಗಳ ಸಹಿತ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಪಂಚರತ್ನ ಯೋಜನೆಯ ಅನುಕೂಲಗಳ ಬಗ್ಗೆ ಇದೇ ಸಂದರ್ಶನದಲ್ಲಿ ಮಂಜುನಾಥ ವಿವರಿಸಿದರು.

ಇದನ್ನೂ ಓದಿ : ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ‘ಮುಸ್ಲಿಮರಿಗೆ ಮತ್ತೆ 2ಬಿ ಮೀಸಲಾತಿ’ : ಎಚ್.ಡಿ ದೇವೇಗೌಡ ಘೋಷಣೆ

ಆವನಿ ಹೋಬಳಿ, ಎಮ್ಮೇನತ್ತ ಪಂಚಾಯಿತಿ, ಕರಡಗೂರು ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಮ್ಮ ನಡೆ ನಿಮ್ಮ ಮನೆಯ ಕಡೆ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಮುಖಂಡರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬಳಿಕ, ತಾಯಲೂರು ಹೋಬಳಿ, ದೂಲಪ್ಪಲ್ಲಿ ಪಂಚಾಯಿತಿ, ಗಾಜಲಬಾವಿ ಗ್ರಾಮದಲ್ಲಿ ನಮ್ಮ ನಡೆ ನಿಮ್ಮ ಮನೆಯ ಕಡೆ ಪ್ರಚಾರ ಕಾರ್ಯಕ್ರಮ ನಡೆಯಿತು.

RELATED ARTICLES

Related Articles

TRENDING ARTICLES