ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ 4ನೇ ಪಟ್ಟಿಯಲ್ಲಿ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.
ಇಂದು ಬಿಡುಗಡೆಯಾದ 4ನೇ ಪಟ್ಟಿಯಲ್ಲಿ ಇಬ್ಬರು ಲಿಂಗಾಯತ ಸಮುದಾಯದವರಿಗೆ, ಒಕ್ಕಲಿಗ, ಭೋವಿ, ಕುರುಬ ಹಾಗೂ ಮುಸ್ಲಿಂ ಸಮುದಾಯದ ತಲಾ ಒಬ್ಬರಿಗೆ ಕಾಂಗ್ರೆಸ್ ಮಣೆ ಹಾಕಿದೆ.
ಇವರೇ 4ನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರು
- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-ಜಗದೀಶ್ ಶೆಟ್ಟರ್
- ಹರಿಹರ-ನಂದಗಾವಿ ಶ್ರೀನಿವಾಸ
- ಲಿಂಗಸಗೂರು-ದುರ್ಗಪ್ಪಹೂಲಗೇರಿ
- ಶ್ರವಣಬೆಳಗೊಳ-ಎಂ.ಎ ಗೋಪಾಲಸ್ವಾಮಿ
- ಶಿಗ್ಗಾಂವಿ-ಮಹ್ಮದ್ ಯೂಸುಫ್ ಸವಣೂರು
- ಚಿಕ್ಕಮಗಳೂರು-ಹೆಚ್.ಡಿ ತಮ್ಮಯ್ಯ
- ಹುಬ್ಬಳ್ಳಿ-ಧಾರವಾಡ ಪಶ್ಚಿಮ-ದೀಪಕ್ ಚಿಂಚೋರೆ
ಇದನ್ನೂ ಓದಿ : ಬಿಜೆಪಿಯಲ್ಲಿ ಯಾರು ಹರಿಶ್ಚಂದ್ರರು ಇಲ್ಲ : ಡಿ.ಕೆ.ಶಿವಕುಮಾರ್
ಟಿಕೆಟ್ ಘೋಷಣೆಯಾಗದ ಕ್ಷೇತ್ರಗಳು
- ಪುಲಕೇಶಿ ನಗರ
- ಸಿ.ವಿ.ರಾಮನ್ ನಗರ
- ಮುಳಬಾಗಿಲು
- ರಾಯಚೂರು ನಗರ
- ಶಿಡ್ಲಘಟ್ಟ
- ಕೆ.ಆರ್.ಪುರ
- ಶಿವಮೊಗ್ಗ ನಗರ
- ಅರಕಲಗೂಡು
ಕಾಫಿನಾಡಲ್ಲಿ ಬಂಡಾಯ ಸಾಧ್ಯತೆ
ತೀವ್ರ ಕುತೂಹಲ ಮೂಡಿಸಿದ ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ಸಿ.ಟಿ.ರವಿ ವಿರುದ್ಧ ತಮ್ಮಯ್ಯನನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಲಿಂಗಾಯುತರ ಮತ ಸೆಳೆಯಲು ತಮ್ಮಯ್ಯಗೆ ಕಾಂಗ್ರೆಸ್ ಗಾಳ ಹಾಕಿದೆ. ಹೆಚ್.ಡಿ.ತಮ್ಮಯ್ಯಗೆ ಮಣೆ ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸಿನಲ್ಲಿ ಬಂಡಾಯ ಹೇಳುವ ಸಾಧ್ಯತೆಯಿದೆ. ಎರಡು ತಿಂಗಳ ಹಿಂದಷ್ಟೇ ಪಕ್ಷ ಸೇರಿದ್ದ ಹೆಚ್.ಡಿ. ತಮ್ಮಯ್ಯಗೆ ಟಿಕೆಟ್ ನೀಡಲು ಮೂಲ ಕಾಂಗ್ರೆಸ್ಸಿಗರು ವಿರೋಧ ಮಾಡಿದ್ದರು. ಅರ್ಜಿ ಹಾಕಿರುವ ಆರು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಆಗ್ರಹಿಸಿದ್ದರು. ಮೂಲ ಕಾಂಗ್ರೆಸ್ಸಿಗರನ್ನು ವಿರೋಧಿಸಿಕೊಂಡು ತಮ್ಮಯ್ಯಗೆ ಮಣೆ ಹಾಕಲಾಗಿದೆ.