ಬೆಂಗಳೂರು : ಐಪಿಎಲ್ ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ಸಂಕಷ್ಟದಲ್ಲಿದ್ದ ಆರ್ಸಿಬಿಗೆ ತವರಿನಲ್ಲೇ ಕನ್ನಡಿ ವೈಶಾಕ್ ವಿಜಯ್ ಕುಮಾರ್ ಗೆಲುವು ತಂದುಕೊಟ್ಟಿದ್ದಾರೆ.
ಹೌದು, ತವರಿನಲ್ಲಿ ಕೊನೆಗೂ ಆರ್ಸಿಬಿ ತಂಡ ಸೋಲಿನ ದವಡೆಯಿಂದ ಹೊರಬಂದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ನಡೆದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ, ಡೆಲ್ಲಿಯನ್ನು 23 ರನ್ಗಳಿಂದ ಮಣಿಸಿ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿದೆ.
ಆರ್ಸಿಬಿ ಪರ ಮಾರಕ ದಾಳಿ ನಡೆಸಿದ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಮೊಹಮ್ಮದ್ ಸಿರಾಜ್ 2 ವಿಕೆಟ್, ಪರ್ನೆಲ್, ಶಹಬಾಜ್ ಅಹಮ್ಮದ್, ಹಸರಂಗ ಹಾಗೂ ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
An absolute stellar start to his IPL career in RCB colours 💫
12th Man, how exceptional has Vyshak been today? 👏#PlayBold #ನಮ್ಮRCB #IPL2023 #RCBvDC pic.twitter.com/1FHj0hVECH
— Royal Challengers Bangalore (@RCBTweets) April 15, 2023
ಆರ್ ಸಿಬಿ ಬೌಲರ್ ಗಳ ಶಿಸ್ತಿನ ದಾಳಿ
ಡೆಲ್ಲಿ ವಿರುದ್ಧದ ಈ ಜಯದ ಮೂಲಕ ಆರ್ ಸಿಬಿ ಗೆಲುವಿನ ಹಳಿಗೆ ಮರಳಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಆರ್ ಸಿಬಿಗೆ ಇಂದಿನ ಗೆಲುವು ಬೂಸ್ಟರ್ ಡೋಸ್ ನೀಡಿದಂತಾಗಿದೆ. ಆರ್ ಸಿಬಿ ಬೌಲರ್ ಗಳ ಶಿಸ್ತಿನ ದಾಳಿಗೆ ಈ ಜಯ ಒಲಿದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಕಿಂಗ್’ ಕೊಹ್ಲಿ ‘ದರ್ಬಾರ್ ‘ : ಹೊಸ ದಾಖಲೆ ನಿರ್ಮಾಣ
Back to winning ways 🙌@RCBTweets register a 23-run win at home and clinch their second win of the season 👏👏
Scorecard ▶️ https://t.co/xb3InbFbrg #TATAIPL | #RCBvDC pic.twitter.com/5lE5gWQm8H
— IndianPremierLeague (@IPL) April 15, 2023
ಡಿಕೆ ಮತ್ತೊಮ್ಮೆ ವೈಫಲ್ಯ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಕೊಹ್ಲಿಯ ಅರ್ಧಶತಕದ ನೆರವಿನಿಂದ 174 ರನ್ ಕಲೆಹಾಕಿತು. ನಾಯಕ ಡುಪ್ಲೆಸಿಸ್ 22, ಮಹಿಪಾಲ್ 26, ಮ್ಯಾಕ್ಸ್ ವೆಲ್ 24, ಶಹಬಾಜ್ 20 ಹಾಗೂ ರಾವತ್ 15ರನ್ ಗಳಿಸಿದರು. ಆದರೆ, ದಿನೇಶ್ ಕಾರ್ತಿಕ್ ತವರು ಅಭಿಮಾನಿಗಳ ಮುಂದೆ ಅಬ್ಬರಿಸಲಿಲ್ಲ.
ಆರ್ ಸಿಬಿ ನೀಡಿದ 175 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ತಂಡದ ಪರ ಕನ್ನಡಿಗ ಮನೀಶ್ ಪಾಂಡೆ ಅರ್ಧಶತಕ ಬಾರಿಸಿದ್ದನ್ನು ಬಿಟ್ಟರೆ, ಬೇರೆ ಯಾವ ಬ್ಯಾಟರ್ ಸಹ ತಂಡದ ನೆರವಿಗೆ ಬರಲಿಲ್ಲ. ಅಂತಿಮವಾಗಿ ಡೆಲ್ಲಿ ತಂಡ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.