ಬೆಂಗಳೂರು : ಬಿಜೆಪಿ ಟಿಕೆಟ್ ಕೈತಪ್ಪಿರುವ ಬೆನ್ನಲ್ಲೇ ಹಲವು ಕಮಲ ನಾಯಕರು ಬಂಡಾಯ ಎದ್ದಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿ.ಟಿ ರವಿ ಪಕ್ಷ ಕಟ್ಟಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೌದು.. ಕುಮಾರಸ್ವಾಮಿನೇ ಪಕ್ಷ ಕಟ್ಟಿದ್ದು ಎಂದು ಒಪ್ಪಿಕೊಳ್ಳುತ್ತೇನೆ. ಪಕ್ಷದ ಗೆಲುವಿಗೆ ಕುಮಾರಸ್ವಾಮಿ ಶ್ರಮ ವಹಿಸಲಿ ಎಂದು ಕುಟುಕಿದ್ದಾರೆ.
ವ್ಯಕ್ತಿಗಿಂತ ಪಕ್ಷ ದೊಡ್ಡದು
ಬಿಜೆಪಿ ಪಕ್ಷ ಎಂ.ಪಿ ಕುಮಾರಸ್ವಾಮಿ ಹಾಗೂ ಸೊಗಡು ಶಿವಣ್ಣ ಅವರನ್ನು ಬೆಳೆಸಿದೆ. ಬಿಜೆಪಿಯಿಂದ ಅನುಕೂಲವನ್ನು ಕೂಡ ಅವರು ಪಡೆದಿದ್ದಾರೆ. ವಿನಂತಿ ಮಾಡುತ್ತೇನೆ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ನಾವು ನೀವು ಯಾವಾಗಲೂ ಮಾತನಾಡಿದ್ದೇವೆ. ಈಗ ಅವರಿಗೆ ಇದು ಅಗ್ನಿಪರೀಕ್ಷೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಸಾಬೀತುಪಡಿಸಲು ಸಕಾಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ‘ಸಾಮ್ರಾಟ್ ಆದ್ರೂ ಬರಲಿ, ಚಕ್ರವರ್ತಿ ಆದ್ರೂ ಬರಲಿ’ : ಡಿ.ಕೆ ಶಿವಕುಮಾರ್
ಪಕ್ಷ ಹೊಸ ರೀತಿಯ ದಾರಿ ಸೃಷ್ಟಿಸುತ್ತೆ
ಈಗ ಇವರೆಲ್ಲರೂ (ಟಿಕೆಟ್ ಕೈತಪ್ಪಿರುವವರು) ಪಕ್ಷದ ಗೆಲುವಿಗಾಗಿ ಶ್ರಮಿಸಲಿ. ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದೆ ಅಂದ ಮಾತ್ರಕ್ಕೆ ಎಲ್ಲಾ ಮುಗಿದಿದೆ ಎಂದು ಭಾವಿಸಬಾರದು. ಪಕ್ಷ ನಿಷ್ಠೆ ಇಟ್ಟು ಪಕ್ಷದ ಗೆಲುವಿಗಾಗಿ ಇವರು ಶ್ರಮಿಸಲಿ. ಈಗ ನೀವು ಗೆಲುವಿಗೆ ಸಹಕರಿಸಿದರೆ, ಹೊಸ ರೀತಿಯ ದಾರಿ ಸೃಷ್ಟಿ ಆಗಬಹುದು. ಹೊಸ ದಾರಿಯೊಂದಿಗೆ ಪಕ್ಷದ ಜೊತೆ ಇದ್ದು ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಎಂ.ಪಿ ಕುಮಾರಸ್ವಾಮಿಗೆ ಐದು ಬಾರಿ ಟಿಕೆಟ್ ಕೊಟ್ಟಿದ್ದು ಬಿಜೆಪಿ. ಮೂರು ಬಾರಿ ಗೆಲ್ಲಿಸಿದ್ದು ಕೂಡ ಬಿಜೆಪಿ. ಈಗಲೂ ಕೂಡ ನಿಮಗೆ ಬಿಜೆಪಿ ಅನ್ನೋದು ನೆನಪಿರಲಿ. ಸದ್ಯ ಟಿಕೆಟ್ ಕೊಡುವುದನ್ನು ನಿರಾಕರಿಸುವುದು ಬಿಜೆಪಿ. ಯಾರನ್ನು ಕೂಡ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಎಂ.ಪಿ ಕುಮಾರಸ್ವಾಮಿಯನ್ನು ಕರೆದು ಮಾತನಾಡುತ್ತೇನೆ ಎಂದು ಸಿ.ಟಿ ರವಿ ಹೇಳಿದ್ದಾರೆ.