Sunday, May 11, 2025

ಕಾರಿನ ಗ್ಲಾಸಿಗೆ ಇಟ್ಟಿಗೆ ಹೊಡೆದ ಕಳ್ಳನ ಮುಖ ಪಂಚರ್..!

ಕೆನಡಾ : ನಾವು ಮಾಡೋ ಪ್ರತಿಯೊಂದು ಕೆಲಸಗಳ ಕರ್ಮಫಲ ಅನುಭವಿಸಿಯೇ ಅನುಭವಿಸ್ತೀವಿ. ಒಳ್ಳೆಯದನ್ನು ಮಾಡಿದ್ರೆ ಒಳ್ಳೆಯದಾಗುತ್ತೆ, ಕೆಟ್ಟದನ್ನು ಮಾಡಿದ್ರೆ ಖಂಡಿತಾ ಕೆಟ್ಟದ್ದು ಆಗುತ್ತೆ ಅನ್ನೋ ನಂಬಿಕೆ ನಿಜಕ್ಕೂ ಸುಳ್ಳಲ್ಲ. ಇಲ್ಲೊಬ್ಬ ಕಳ್ಳ ಕಾರು ಕದಿಯಲು ಅದರ ಗ್ಲಾಸಿಗೆ ಇಟ್ಟಿಗೆಯಿಂದ ಹೊಡೆದು ತಾನೇ ಪೆಟ್ಟು ತಿಂದು ತೆಪ್ಪಗೆ ಹೋಗಿದ್ದಾನೆ..! ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಕೆನಾಡಾದ ಬ್ರಾಂಡಾನಿನಲ್ಲಿ ಕ್ರೇಗ್ ಎಂಬುವವರ ಮನೆ ಹೊರಗಡೆ ನಿಂತಿದ್ದ ಕಾರನ್ನು ಕದಿಯಲು ಕಳ್ಳನೊಬ್ಬ ಹೊಂಚು ಹಾಕಿದ್ದ. ಕಾರಿನ ಸುತ್ತ ಮುತ್ತ ಓಡಾಡಿ, ಅಲ್ಲೇ ಪಕ್ಕದಲ್ಲಿದ್ದ ಇಟ್ಟಿಗೆ ತೆಗೆದು ಕಾರಿನ ಗಾಜಿಗೆ ಹೊಡೆದಿದ್ದಾನೆ. ಆ ಇಟ್ಟಿಗೆ ರಿಟರ್ನ್​ ಆ ಕಳ್ಳನ ಮುಖಕ್ಕೆ ಬಡಿದಿದೆ. ಅಲ್ಲಿ ಒದ್ದಾಡಿದ ಕಳ್ಳ ಇಟ್ಟಿಗೆಯನ್ನು ಕಾಂಪೌಂಡ್ ಹೊರಗೆ ಎಸೆದು ಕಾಲ್ಕಿತ್ತಿದ್ದಾನೆ. ಸಿಸಿಟಿವಿಯಲ್ಲಿ ಆ ದೃಶ್ಯ ಸೆರೆಯಾಗಿದೆ.

https://www.facebook.com/martin.craig.5095110/videos/140110920580519/

RELATED ARTICLES

Related Articles

TRENDING ARTICLES