ಬೆಂಗಳೂರು : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಳಿಕ ಸಚಿವರಾದ ವಿ.ಸೋಮಣ್ಣ ಹಾಗೂ ಆನಂದ್ ಸಿಂಗ್ ರಾಜಕೀಯ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು, ಒಂದೇ ಕುಟುಂಬಕ್ಕೆ ಎರಡೆರಡು ಟಿಕೆಟ್ ನೀಡಲು ಸಾಧ್ಯವಿಲ್ಲ. ಪುತ್ರನಿಗೆ ಟಿಕೆಟ್ ನೀಡಬೇಕೆಂದರೆ ನೀವು ಚುನಾವಣಾ ರಾಜಕೀಯದಿಂದ ನಿವೃತ್ತಿ ಪ್ರಕಟಿಸಿ ಎಂದು ಬಿಜೆಪಿ ಹೈಕಮಾಂಡ್ ಕಟ್ಟಪ್ಪಣೆ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.
ಸಚಿವ ವಿ.ಸೋಮಣ್ಣ ತಮ್ಮ ಪುತ್ರ ಅರುಣ್ ಸೋಮಣ್ಣಗೆ ಹಾಗೂ ವಿಜಯನಗರ ಕ್ಷೇತ್ರದಿಂದ ಪುತ್ರ ಸಿದ್ಧಾರ್ಥ್ ಗೆ ಆನಂದ್ ಸಿಂಗ್ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಈಶ್ವರಪ್ಪ ನಡ್ಡಾಗೆ ಬರೆದಿರುವ ಪತ್ರದಲ್ಲೇನಿದೆ?: ಹೈಕಮಾಂಡ್ ಮುಂದಿಟ್ಟ ಡಿಮ್ಯಾಂಡ್ ಏನು?
ಆನಂದ್ ಸಿಂಗ್ ರಾಜಕೀಯ ನಿವೃತ್ತಿ?
ಸಚಿವ ಆನಂದ್ ಸಿಂಗ್ ಕೂಡ ಹಲವು ನಾಯಕರಂತೆ ನನ್ನ ಪುತ್ರ ಸಿದ್ದಾರ್ಥ್ ಅವರಿಗೂ ವಿಜಯನಗರ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ ಬಳಿ ಪಟ್ಟು ಹಿಡಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ನನಗೆ ಈ ಬಾರಿ ಟಿಕೆಟ್ ಬೇಡ ಅಂತಾ ಹೇಳಿದ್ದಾರೆ ಎನ್ನಲಾಗಿದೆ.
ನನಗೆ ಟಿಕೆಟ್ ಬೇಡ. ಆದರೆ, ನನ್ನ ಪುತ್ರ ಈಗಾಗಲೇ ರಾಜಕೀಯದಲ್ಲಿ ಸಕ್ರಿಯನಾಗಿ ಜನಪ್ರಿಯತೆ ಗಳಿಸುತ್ತಿರುವ ಕಾರಣ ಆತನಿಗೇ ಟಿಕೆಟ್ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಲೋಚಿಸುವುದಾಗಿ ಬಿಜೆಪಿ ಹೈಕಮಾಂಡ್ ಭರವಸೆ ನೀಡಿದೆ ಎನ್ನಲಾಗಿದೆ.