ಮೈಸೂರು : ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿದ್ದು. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಇಂದು ಬಂಡೀಪುರಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ, ಬಂಡೀಪುರದಲ್ಲಿ 15 ಕಿ.ಮೀ. ಹುಲಿ ಸಫಾರಿ ನಡೆಸಿ, ತರುವಾಯ ಅರಣ್ಯ ಸಿಬ್ಬಂದಿ ಜತೆಗೆ ಸಂವಾದ ಪ್ರಧಾನಿ ನಡೆಸಲಿದ್ದಾರೆ.
ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಲಿರೋ ಮೋದಿ
ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಬಂಡೀಪುರದಲ್ಲಿ ಬರೋಬ್ಬರಿ 22 ಕಿ.ಮೀ ಸಫಾರಿ ಮಾಡಲಿದ್ದು, 2 ಗಂಟೆಗಳ ಕಾಲ ಅರಣ್ಯದಲ್ಲೇ ಕಾಲ ಕಳೆಯಲಿದ್ದಾರೆ.
ಮೈಸೂರಿನಲ್ಲಿ ಎಲ್ಲೆಡೆ ಬಿಗಿಭದ್ರತೆ
ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಆಗಮಿಸಿರುವ ಹಿನ್ನಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅವರು ಸಂಚರಿಸುವ ಮಾರ್ಗ ಮತ್ತು ಭಾಗವಹಿಸುವ ಕಾರ್ಯಕ್ರಮದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿದೆ.
ಹೀಗಿದೆ ಪ್ರಧಾನಿ ಮೋದಿ ಶೆಡ್ಯೂಲ್
*ಏಪ್ರಿಲ್ 9ರಂದು (ಇಂದು) ಬೆಳಗ್ಗೆ 6.30ಕ್ಕೆ ಸೇನಾ ಹೆಲಿಕಾಪ್ಟರ್ ನಲ್ಲಿ ಬಂಡೀಪುರದತ್ತ ಪ್ರಯಾಣ
* ಮೇಲುಕಾಮನ ಹಳ್ಳಿ ಸಫಾರಿ ಕೌಂಟರ್‌ನಿಂದ ಸಫಾರಿ ಆರಂಭ
* 2 ಗಂಟೆಗಳ ಕಾಲ ಪ್ರಧಾನಿ ಮೋದಿ ಸಫಾರಿ
* ಕೇವಲ 5 ವಾಹನಗಳಿಗೆ ಮಾತ್ರ ಸಫಾರಿ ಅವಕಾಶ
* ವೀವ್ಯೂ ಪಾಯಿಂಟ್ ಮತ್ತು ಕಳ್ಳಬೇಟೆ ತಡೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ
* ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ವಾಪಸ್