Monday, May 6, 2024

‘ನನ್ನ ಅನ್ನ’ದ ಮೊದಲ ತುತ್ತು ದಲಿತ ಸಮುದಾಯಕ್ಕೆ ಮೀಸಲು : ಸಿಎಂ ಬೊಮ್ಮಾಯಿ

ಬೆಂಗಳೂರು : ನನ್ನ ಅನ್ನದ ಮೊದಲ ತುತ್ತು ದಲಿತ ಸಮುದಾಯಕ್ಕೆ ಮೀಸಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ಪರಿಶಿಷ್ಟ ಸಮುದಾಯದ ಒಕ್ಕೂಟ ಏರ್ಪಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡದ್ದಾರೆ.

ಜನ  ಕಾಂಗ್ರೆಸ್ ಸುಳ್ಳನ್ನು ನಂಬಬಾರದು. ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ 7 ಡಿ ಕಾನೂನನ್ನು ತೆಗೆಯಲಾಗುವುದು. ದಲಿತ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾನೂನು ಸಿದ್ದರಾಮಯ್ಯ ಮಾಡಿದ್ದರು. ನನ್ನ ಅನ್ನದ ಮೊದಲ ತುತ್ತು ದಲಿತ ಸಮುದಾಯಕ್ಕೆ ಮೀಸಲು ಎಂದ ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಅವರು ಜಾತಿ ವಿಷ ಬೀಜ ಬಿತ್ತಲು ಮುಂದಾಗಿ, ಧರ್ಮ ಒಡೆಯಲು ಮುಂದಾದರು.ಮೀಸಲಾತಿ ಹೆಚ್ಚಿಸುವ ಬಗ್ಗೆ  ಕಾಂಗ್ರೆಸ್ ಗೆ ಬದ್ಧತೆಯಾಗಲಿ ರಾಜಕೀಯ ಇಚ್ಛಾಶಕ್ತಿಯಾಗಲಿ ಇಲ್ಲ.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದರು.

ಒಳ ಮೀಸಲಾತಿ ಹೋರಾಟ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಒಳ ಮೀಸಲಾತಿಯನ್ನು ಯಾರು ಮಾಡತ್ತಾರೆ ಅವರು ಬಸ್ಮವಾಗತ್ತಾರೆ ಅಂತ ಹೇಳುತ್ತಿದ್ದರು. ಅಧಿಕಾರ ಶಾಶ್ವತ ಅಲ್ಲಾ, ಜನರ  ಹೃದಯದಲ್ಲಿ ದೊರೆಯುವ ಸ್ಥಾನ ದೊಡ್ಡದು ಎಂದರು. ಇಂತಹ ಕಾಂಗ್ರೆಸ್ ನಿಂದ ದಲಿತರು ಎಚ್ಚರಿಕೆಯಿಂದ ಇರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ನಾನು ಬೇರೆ ಸಿಎಂ ರೀತಿ ಅಲ್ಲಾ..!

ಸಿದ್ದರಾಮಯ್ಯ ಅವರು ಮೀಸಲಾತಿ ಹಾಗೂ ಒಳ ಮೀಸಲಾತಿ ಪರವಾಗಿದ್ದರೋ ವಿರೋಧವಾಗಿದ್ದರೋ ಎಂದು ಸ್ಪಷ್ಟ ಚಿತ್ರಣ ನೀಡಲಿ. ಅದು ಬಿಟ್ಟು ದ್ವಂದ್ವ ನೀತಿ ಬೇಡ  ಎಂದರು. ಕೇಂದ್ರಕ್ಕೆ ಸಲ್ಲಿಸಿರುವ ಪತ್ರದ ಪ್ರತಿ ಪ್ರದರ್ಶನ ಮಾಡಿದ ಸಿಎಂ ಅವರು ನಾನು ಬೇರೆ ಮುಖ್ಯಮಂತ್ರಿಗಳ ರೀತಿ ಅಲ್ಲಾ, ಕೆಲಸ ಮಾಡಿ ಮಾತನಾಡುವ ಮುಖ್ಯಮಂತ್ರಿ ಎಂದರು.

ಬದಲಾವಣೆ ಬೀಜ ಬಿತ್ತನೆಯಾಗಲಿದೆ

ಅಸಾಧ್ಯವನ್ನು ಸಾಧ್ಯ ಮಾಡಿ‌ ತೋರಿಸಿಸಲಾಗಿದೆ. ಇದು ಸಾಮಾಜಿಕ, ಸಮಾನತೆ ಇರುವ, ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ತತ್ವಾದರ್ಶಗಳನ್ನು  ಇಟ್ಟುಕೊಂಡು ಮಾಡಿರುವ ಕಾನೂನು ದೇಶದಲ್ಲಿ ಇದು ಮಹತ್ತರ ಬದಲಾವಣೆಗೆ ನಾಂದಿಯಾಗಲಿದೆ. ದೇಶದ ಬದಲಾವಣೆ ಬೀಜ ಕರ್ನಾಟಕದಿಂದ ಬಿತ್ತನೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES