Friday, November 22, 2024

ಇವ್ರನ್ನು ನೋಡಿ ಕಲ್ತುಕೊಳ್ಳಿ ರಮ್ಯಾ : ಪ್ರಭುದೇವ ‘ಕನ್ನಡ’ಕ್ಕೆ ಕನ್ನಡಿಗರ ‘ಬಹುಪರಾಕ್’

ಬೆಂಗಳೂರು : ‘ವೀಕೆಂಡ್ ವಿಥ್ ರಮೇಶ್’ ಸೀಸನ್ 5ರಲ್ಲಿ ಮೊದಲ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ರಮ್ಯಾ ಕನ್ನಡ ಮಾತನಾಡಿದ್ದಕ್ಕಿಂತ ಇಂಗ್ಲಿಷ್ ಮಾತನಾಡಿದ್ದೇ ಹೆಚ್ಚು. ಹೀಗಾಗಿಯೇ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಆದರೆ, ಡ್ಯಾನ್ಸರ್ ಪ್ರಭುದೇವ ಕನ್ನಡಕ್ಕೆ ಕನ್ನಡಿಗರು ಬಹುಪರಾಕ್ ಹೇಳಿದ್ದಾರೆ.

ಹೌದು, ತಮಿಳುನಾಡಲ್ಲಿ ಜೀವನ ಮಾಡುತ್ತಿದ್ದರೂ, ಕನ್ನಡ ಶೋನಲ್ಲಿ ಕನ್ನಡ ಮಾತಾಡೋ ದೊಡ್ಡ ಮನುಷ್ಯ. ಎಷ್ಟೇ ಎತ್ತರಕ್ಕೆ ಬೇಳದರು ಬಾಗಿ ನಡೆಯಬೇಕು ಅನ್ನೋ ಮಾತು ಸತ್ಯ. ಸರ್, ಕನ್ನಡದ ಕಂಪನ್ನು ಎಲ್ಲೆಲೂ ಪಸರಿಸಿದಿರಿ ಎಂದು ಗುಣಗಾನ ಮಾಡಿದ್ದಾರೆ.

‘ವೀಕೆಂಡ್ ವಿಥ್ ರಮೇಶ್’ ಸೀಸನ್ 5ರಲ್ಲಿ ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಡ್ಯಾನ್ಸರ್ ಪ್ರಭುದೇವ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರಭುದೇವ ಅಪ್ಪಟ ಕನ್ನಡದಲ್ಲಿ, ಅದರಲ್ಲೂ ಚಾಮರಾಜನಗರ ಭಾಷಾ ಶೈಲಿಯಲ್ಲಿ ಮಾತನಾಡಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದ್ದಾರೆ.

ಪ್ರಭುದೇವ ಅವರು, ಮಡಗ್ಗುಟ್ಟು, ಆರಾಕು, ಉದ್ನಪ್ಪಳ, ಸಂಡಗ, ಕಡ್ಕ ತಿನ್ನದು, ರವ ಉಂಡ, ಮದವ ಮುಂತಾದ ಹಳ್ಳಿಸೊಗಡಿನ ಮಾತುಗಳನ್ನಾಡಿದ್ದಾರೆ. ಪ್ರಭುದೇವ ಕನ್ನಡಕ್ಕೆ ನೆಟ್ಟಿಗರು ಮನ ಸೋತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ತಾಯಿ ಭುವನೇಶ್ವರಿಗೆ ನನ್ನ ವಂದನೆಗಳು

ವಿಶ್ವ ವಿಖ್ಯಾತರಾದವರ ಬಾಯಲ್ಲಿ ಕನ್ನಡದ ನುಡಿಗಳ ಕೇಳುವುದೆ ನಮಗೊಂದು ರೋಮಾಂಚನ ಮತ್ತು ಹೆಮ್ಮೆಯ ವಿಚಾರ.  ಪ್ರಭುದೇವ ಸರ್.. ನಿಮ್ಮ ಕುಟುಂಬಕ್ಕೆ ಕನ್ನಡಿಗರಿಂದ ಕೋಟಿ ಪ್ರಣಾಮಗಳು. ಹಾಗೆಯೇ ನಿಮ್ಮ ಬಾಯಲ್ಲಿ ಕನ್ನಡವ ನುಡಿಸುವ ಶಕ್ತಿಯಾಗಿ ನಿಂತಿರುವ ನಿಮ್ಮ ತಾಯಿ ಆ ಭುವನೇಶ್ವರಿಗೆ ನನ್ನ ವಂದನೆಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವ್ರನ್ನು ನೋಡಿ ಕಲ್ತುಕೊಳ್ಳಿ ರಮ್ಯಾ

ಎಷ್ಟೋ ಕನ್ನಡದ ನಟ-ನಟಿಯರು ಇಂಗ್ಲಿಷ್ ಗೆ ಹುಟ್ಟೋರಂಗೆ ಆಡ್ತಾರೆ. ಕನ್ನಡ ಮಾತಾಡೋದನ್ನು ಇವರನ್ನು ನೋಡಿ ಕಲಿಬೇಕು. ಅಪ್ಪಟ ಕನ್ನಡದ ಸೊಗಡು ತುಂಬಿದ ನಿಮ್ಮ ನುಡಿನಡೆಗೆ ಮನಸು ತುಂಬಿ ಬಂದಿದೆ. ಇವ್ರನ್ನು ನೋಡಿ ಕಲ್ತುಕೊಳ್ಳಿ ರಮ್ಯಾ. ಭಾರತ ಇಂಡಸ್ಟ್ರಿಯಲ್ಲಿ ದೊಡ್ಡ ಸ್ಟಾರ್ ಕನ್ನಡ ಎಷ್ಟು ಚಂದ ಮಾತಾಡ್ತಾರೆ ಎಂದು ನಟಿ ರಮ್ಯಾರ ಕಾಲೆಳೆದಿದ್ದಾರೆ.

ಅರ್ದಂ ಬರ್ದ ಬೆಂದಿರೋ ಹುಡುಗಿ

‘ಏನೇ ಹೇಳಿ ನಮ್ಮ ಪ್ರಭುದೇವ ನಮ್ಮ ಹೆಮ್ಮೆಯ ಕನ್ನಡಿಗ ಅಲ್ವಾ. ಅದ್ಯಾವುದೋ ಅರ್ದಂ ಬರ್ದ ಬೆಂದಿರೋ ಹುಡುಗಿ ಬಂದಿದ್ಲು ಗುರು. ಕ್ವೀನ್ ಅಂತೆ ಕ್ವೀನ್..! ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?’ ಎಂದು ಕಾಮೆಂಟ್ ಹರಿಬಿಟ್ಟಿದ್ದಾರೆ.

‘ಪ್ರಭುದೇವ ಎಪಿಸೋಡ್ ಮತ್ತೆ ಮತ್ತೆ ನೋಡಬೇಕು ಅನ್ಸುತ್ತೆ. ಇದನ್ನು ನೋಡಿ, ಯಾಕಂದ್ರೆ ನಮ್ಮ ಭಾಷೆ ಕೇಳೋಕೆ ಚಂದ. ನಾಳೆಯ ಸಂಚಿಕೆಗಾಗಿ ಕಾಯುತ್ತಿದ್ದೇವೆ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES