Friday, November 22, 2024

Wow : ಈ ಬಾರಿ ಮತ ಚಲಾಯಿಸಲಿದ್ದಾರೆ 16,976 ಶತಾಯುಷಿಗಳು

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿ ಬರೋಬ್ಬರಿ 16,976 ಶತಾಯುಷಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ಮೇ 10ಕ್ಕೆ ಮತದಾನ ನಡೆಯಲಿದೆ. ಮೇ 13ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆ ಏಪ್ರಿಲ್ 23 ಕೊನೆಯ ದಿನವಾಗಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ರಾಜ್ಯದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

16,976 ಶತಾಯುಷಿ ಮತದಾರರು

ಕರ್ನಾಟಕದ ಚುನಾವಣೆಯಲ್ಲಿ ಮೊದಲ ಬಾರಿಗೆ 9.17 ಲಕ್ಷಕ್ಕೂ ಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ. 17 ವರ್ಷಕ್ಕೂ ಮೇಲ್ಪಟ್ಟ ಯುವಕರಿಂದ 1.25 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಏಪ್ರಿಲ್ 1, 2023ರ ವೇಳೆಗೆ 18 ವರ್ಷ ತುಂಬುವ ಯುವಕರಿಂದ ಸುಮಾರು 41,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 80 ವರ್ಷ ಮೇಲ್ಪಟ್ಟ 12,15,763 ಮಂದಿ ಮತದಾರರಿದ್ದಾರೆ. 16,976 ಮಂದಿ 100 ವರ್ಷ ಮೇಲ್ಪಟ್ಟವರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಂತರ್ ರಾಜ್ಯ ಚೆಕ್‌ಪೋಸ್ಟ್‌ಗಚೆಕ್ ಚೆಕ್‌ಪೋಸ್ಟ್‌ ಗಳಲ್ಲಿ ಕಟ್ಟುನಿಟ್ಟು

  • 19 ಜಿಲ್ಲೆಗಳಲ್ಲಿ 171 ಚೆಕ್‌ಪೋಸ್ಟ್‌ಗಳು
  • ಅಂತರ್ ರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಹದ್ದಿನಕಣ್ಣು
  • ಹಲವು ಏಜೆನ್ಸಿಗಳು ಇದರ ಜವಾಬ್ದಾರಿ
  • ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ
  • 24 ಗಂಟೆಗಳ ಕಾಲ ನಿಗಾ ಇಡುವ ಚೆಕ್‌ಪೋಸ್ಟ್‌ಗಳಿವೆ
  • 128 ಪೊಲೀಸ್ ಇಲಾಖೆಯ ಚೆಕ್‌ಪೋಸ್ಟ್‌ಗಳು
  • 13 ಜಿಲ್ಲೆಗಳು ಬೇರೆ ರಾಜ್ಯಗಳೊಂದಿಗೆ ಗಡಿ ಪ್ರದೇಶ ಹೊಂದಿದೆ

ಚುನಾವಣೆ ಹೈಲೆಟ್ಸ್

  • ಇಂದಿನಿಂದ ನೀತಿಸಂಹಿತೆ ಜಾರಿ
  • ಗೆಜೆಟ್ ನೋಟಿಫಿಕೇಶನ್ : ಏಪ್ರಿಲ್ 13, 2023
  • ನಾಮಿನೇಷನ್ ಪ್ರಕ್ರಿಯೆ ಆರಂಭ : ಏಪ್ರಿಲ್ 20, 2023
  • ನಾಮ ಪರೀಶೀಲನೆ: ಏಪ್ರಿಲ್ 21, 2023
  • ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಏಪ್ರಿಲ್ 24, 2023
  • ಮತದಾನ: ಮೇ 10, 2023
  • ರಿಸಲ್ಟ್: 13, 2023

RELATED ARTICLES

Related Articles

TRENDING ARTICLES