ಬೆಂಗಳೂರು : ಪವರ್ ಬೇಟೆ ಸ್ಟಿಂಗ್ ಆಪರೇಷನ್ನಿಂದ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಪವರ್ ಟಿಟಿ ಶುಕ್ರವಾರ 10 ಶಾಸಕರು ಲಂಚ ಪಡೆಯುವ ವಿಡಿಯೋ ಪ್ರಸಾರ ಮಾಡಿತ್ತು. ಇಂದು ಸಹ ಹಲವು ಶಾಸಕರು ಬಿಡಿಗಾಸಿಗೆ ಕೈ ಚಾಚಿ ಪವರ್ ಬಲೆಗೆ ಬಿದ್ದಿದ್ದಾರೆ.
ಹೌದು, ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 11ನೇ ಬೇಟೆ ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್. ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ 2 ಲಕ್ಷ ರೂಪಾಯಿ ಡೀಲ್ ಕುದುರಿಸಿದ್ದಾರೆ.
ನಾಯಕ್ ಸ್ಟ್ರೈಟ್ & ಬೋಲ್ಡ್
ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ಮಾನ್ವಿ ಶಾಸಕ ಡೀಲ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಡೀಲ್ ಮಾತುಕತೆ ನಡೆದಿತ್ತು. ಲಂಚ ಪಡೆಯುವ ವಿಷಯದಲ್ಲಿ ಶಾಸಕ ರಾಜಾವೆಂಕಟಪ್ಪ ನಾಯಕ್ ಸ್ಟ್ರೈಟ್ & ಬೋಲ್ಡ್ ಆಗಿದ್ದರು. ಕೇಬಲ್ ಅಳವಡಿಕೆಗಾಗಿ ಎರಡು ಲಕ್ಷ ಲಂಚಕ್ಕೆ ಶಾಸಕರು ಬೇಡಿಕೆ ಇಟ್ಟಿದ್ದರು.
ಲಂಚದ ವಿಚಾರವನ್ನು ರಾಜಾ ವೆಂಕಟಪ್ಪ ನಾಯಕ್ ಚೀಟಿಯಲ್ಲಿ ಬರೆದು ಸಹಿ ಹಾಕಿಸಿಕೊಂಡಿದ್ದಾರೆ. ಅಂತಿಮವಾಗಿ ಪ್ರತೀ ಕಿಲೋಮೀಟರ್ಗೆ 1 ಲಕ್ಷ ಲಂಚಕ್ಕೆ ಒಪ್ಪಿಕೊಂಡಿದ್ದರು. ಅಡ್ವಾನ್ಸ್ ಆಗಿ ಪಿಎ ಮೂಲಕ 1 ಲಕ್ಷ ರೂಪಾಯಿ ಹಣ ಪಡೆಯುವ ಮೂಲಕ ಲಂಚಾವತಾರ ಬಯಲಾಗಿದೆ.
ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಬಿಡಿಗಾಸಿಗೆ ಕೈ ಚಾಚಿದ ಶಾಸಕ ರಾಜಾ ವೆಂಕಟಪ್ಪ ನಾಯಕ್ ವಿಧಾನಸಭಾ ಚುನಾವಣೆ ಹೊತ್ತಲ್ಲೇ ತಗ್ಲಾಕಿಕೊಂಡಿದ್ದಾರೆ. ರಾಜಾ ವೆಂಕಟಪ್ಪ ನಾಯಕ್ ಲಂಚಾವತಾರದ ದೃಶ್ಯ ‘ಪವರ್ ಟಿವಿ’ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೆಸರು: ರಾಜಾ ವೆಂಕಟಪ್ಪ ನಾಯಕ್
ಕ್ಷೇತ್ರ: ಮಾನ್ವಿ ವಿಧಾನಸಭಾ ಕ್ಷೇತ್ರ
ಪಕ್ಷ : ಜೆಡಿಎಸ್
ಜಿಲ್ಲೆ: ರಾಯಚೂರು
ಲಂಚ ಪಡೆದ ಸ್ಥಳ: ಶಾಸಕರ ಭವನ, ಬೆಂಗಳೂರು