Friday, December 20, 2024

ಪವರ್ ಬೇಟೆ ನಂ.9 : 4 ಲಕ್ಷಕ್ಕೆ ಶಾಸಕ ‘ದರ್ಶನಾ’ಪುರ ಲಂಚಾವತಾರ ‘ದರ್ಶನ’

ಬೆಂಗಳೂರು : ಯಾದಗಿರಿ ಜಿಲ್ಲೆ ಶಹಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ ಅವರು ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 9ನೇ ಶಾಸಕ.

ಪವರ್ ಟಿವಿ ರಹಸ್ಯ ಕಾರ್ಯಾಚರಣೆ ವೇಳೆ ಶರಣಬಸಪ್ಪ ಗೌಡ ದರ್ಶನಾಪುರ ಲಂಚಾವತಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಪ್ರತೀ ಕಿಲೋಮೀಟರ್​ಗೆ 1 ಲಕ್ಷ ರೂಪಾಯಿ ಲಂಚ ನೀಡುವಂತೆ ಪವರ್ ಟಿವಿ ಪ್ರತಿನಿಧಿ ಬಳಿ ಬೇಡಿಕೆ ಇಟ್ಟಿದ್ದಾರೆ.

ಶಹಾಪುರ ಪಟ್ಟಣದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆಗೆ ಶಾಸಕರು ಡೀಲ್ ಕುದುರಿಸಿದ್ದಾರೆ. ಪ್ರತೀ ಕಿಲೋಮೀಟರ್​ಗೆ 1 ಲಕ್ಷ ನಿಡಲೇಬೇಕು ಎಂದು ಶರಣಬಸಪ್ಪ ಗೌಡ ದರ್ಶನಾಪುರ ಪಟ್ಟು ಹಿಡಿದಿದ್ದಾರೆ. ಒಟ್ಟು 4 ಕಿಲೋಮೀಟರ್​ಗೆ 4 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಅಡ್ವಾನ್ಸ್ ಆಗಿ ಸಹಾಯಕನ ಮೂಲಕ 1 ಲಕ್ಷ ರೂಪಾಯಿ ಸ್ವೀಕರಿಸುವಾಗ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ ಅವರ ಭ್ರಷ್ಟಾಚಾರ ಪವರ್ ಟಿವಿ ಕ್ಯಾಮೆರಾ ಮುಂದೆ ಬಟಾ ಬಯಲಾಗಿದೆ.

 

ಶರಣಬಸಪ್ಪ ಗೌಡ ದರ್ಶನಾಪುರ

ಪಕ್ಷ: ಕಾಂಗ್ರೆಸ್

ವಯಸ್ಸು : 62 ವರ್ಷ

ಕ್ಷೇತ್ರ: ಶಹಾಪುರ ವಿಧಾನಸಭಾ ಕ್ಷೇತ್ರ

ಜಿಲ್ಲೆ: ಯಾದಗಿರಿ

ಡೀಲ್ ನಡೆದ ಸ್ಥಳ: ಶಾಸಕರ ಭವನ, ಬೆಂಗಳೂರು

 

ಪ್ರಮುಖ ಅಂಶಗಳು:

ನಾಲ್ಕು ಬಾರಿ ಶಾಸಕರಾಗಿ ಆಯ್ಕೆ

ಸಚಿವರಾಗಿಯೂ ಸೇವೆ ಸಲ್ಲಿಸಿರೋ ಅನುಭವ

ಬಿಜೆಪಿ ಸರ್ಕಾರ ಹುಟ್ಟಿದ್ದೇ ಭ್ರಷ್ಟಾಚಾರದಿಂದ ಎಂದು ಆರೋಪ

ಒಟ್ಟು ಆಸ್ತಿ : 6.32 ಕೋಟಿ

RELATED ARTICLES

Related Articles

TRENDING ARTICLES