Tuesday, May 13, 2025

ರೈತರಿಗೆ ‘ಯುಗಾದಿ’ ಸಿಹಿ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿ

ಬೆಂಗಳೂರು : ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿ ಸುದ್ದಿ ನೀಡಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇಂದು 975 ಕೋಟಿ ರೂ.ಗಳನ್ನು ರಾಜ್ಯದ 48,75,000 ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬೊಮ್ಮಾಯಿ ಅವರು, 2022-23ನೇ ಸಾಲಿನ ಎರಡನೇ ಕಂತಿನ ಆರ್ಥಿಕ ನೆರವಾದ 975 ಕೋಟಿ ರೂ.ಗಳನ್ನು ರಾಜ್ಯದ 48,75,000 ರೈತರ ಖಾತೆಗಳಿಗೆ ನೇರವಾಗಿ ಜಮಾಕ್ಕೆ ಇಂದು ಚಾಲನೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

10,000 ನೆರವು ನೀಡಲಾಗುತ್ತಿದೆ

ಪಿಎಂ ಕಿಸಾನ್‌–ಕರ್ನಾಟಕ ವಿಭಾಗದಿಂದ ಈ ನಿಧಿ ಜಮಾ ಆಗುತ್ತಿದೆ. ಭಾರತದಲ್ಲಿರುವ ಭೂಹಿಡುವಳಿ ಹೊಂದಿರುವ ರೈತರಿಗೆ ಆದಾಯ ಬೆಂಬಲ ಒದಗಿಸುವ ಯೋಜನೆ ಇದಾಗಿದೆ. ಕೇಂದ್ರದಿಂದ 6,000 ಹಾಗೂ ರಾಜ್ಯದಿಂದ 4,000 ಸೇರಿ ಒಟ್ಟು 10,000 ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರದಿಂದ ಯೋಜನೆ ಅಡಿಯಲ್ಲಿ 2019 ರಿಂದ ಈವರೆಗೆ 50.3 ಲಕ್ಷ ಫಲಾನುಭವಿಗಳಿಗೆ 4,821 ಕೋಟಿ ರೂ. ಆರ್ಥಿಕ ಸಹಾಯಧನ ನೀಡಲಾಗಿದೆ.

RELATED ARTICLES

Related Articles

TRENDING ARTICLES