Monday, November 25, 2024

ಬಿಜೆಪಿಗೆ ಅಣ್ಣಾಮಲೈ ಬಿಗ್ ಶಾಕ್ : ಪಕ್ಷ ತೊರೆಯುವ ನಿರ್ಧಾರ?

ಬೆಂಗಳೂರು : ತಮಿಳುನಾಡು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿಕೆ ಹಾಗೂ ಅವರ ಮುಂದಿನ ನಿರ್ಧಾರ ಬಿಜೆಪಿ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದೆ.

ಹೌದು, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಮುಂಬರುವ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಎಐಎಡಿಎಂಕೆ (AIADMK) ಜತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ನಾನು ಪಕ್ಷದಲ್ಲಿರುವುದಿಲ್ಲ ಎಂದು ಅಣ್ಣಾಮಲೈ ಖಡಕ್ ಸೂಚನೆ ರವಾನಿಸಿದ್ದಾರೆ.

ಏಕಾಂಗಿಯಾಗಿ ಹೋರಾಟ ಅನಿವಾರ್ಯ

ತಮಿಳುನಾಡಿನಲ್ಲಿ ರಾಜಕೀಯ ನೆಲೆ ಕಾಣಬೇಕಾದರೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನಿವಾರ್ಯ. ನಾನು ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತೂ, ಎಐಎಡಿಎಂಕೆಯ ಕಿರಿಯ ಮಿತ್ರನಾಗಿ ಇರಲು ಅಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸದನದಲ್ಲಿ ಅವಕಾಶ ನೀಡಿದ್ರೆ ಮಾತನಾಡ್ತೀನಿ : ರಾಹುಲ್ ಗಾಂಧಿ

ಇತ್ತೀಚೆಗಷ್ಟೇ ಬಿಜೆಪಿಯ ಐಟಿ ವಿಭಾಗದ ಹಲವು ಪದಾಧಿಕಾರಿಗಳು ಬಿಜೆಪಿಗೆ ರಾಜೀನಾಮೆ ನೀಡಿ ಎಐಎಡಿಎಂಕೆ ಸೇರಿದ್ದರು. ಇದೀಗ, ಅಣ್ಣಾಮಲೈ ಅವರ ಈ ಅಭಿಪ್ರಾಯಕ್ಕೆ ಸಭೆಯಲ್ಲಿ ಪರ-ವಿರೋಧ ಎರಡೂ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ.

ಈ ವಿಷಯದಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ವಾಕ್ಸಮರ ನಡೆದಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ದ್ರಾವಿಡ ಪಕ್ಷಗಳ ನಡುವೆ ಜನರಿಗೆ ಪ್ರಮುಖ ಆಯ್ಕೆ ನಾವಾಗಬೇಕೆ ವಿನಃ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಕೆ. ಅಣ್ಣಾಮಲೈ ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES