ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಂದೆ ಅಂಬರೀಶ್ ವಿಧಿವಶರಾಗಿ ಇನ್ನೂ ಒಂದು ವರ್ಷವಾಗಿಲ್ಲ. ಹೀಗಾಗಿ ಅಭಿ ತನ್ನ ಬರ್ತ್ಡೇಯನ್ನು ಆಚರಿಸಿಕೊಂಡಿಲ್ಲ. ತಂದೆಯ ಅಗಲಿಕೆ ಹಿನ್ನೆಲೆಯಲ್ಲಿ ತಾನು ಹುಟ್ಟುಹಬ್ಬವನ್ನು ಸಂಭ್ರಮಿಸ್ತಿಲ್ಲ. ಹೀಗಾಗಿ ತನ್ನ ಹುಟ್ಟುಹಬ್ಬ ಆಚರಣೆಗಂತ ಯಾರೂ ಬರ್ಬೇಡಿ ಅಂತ ಅಭಿ ತನ್ನ ಫ್ಯಾನ್ಸ್ಗೂ ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಇಂದು ಅಭಿ ಬರ್ತ್ಡೇ ಜೋಶ್ ಎಲ್ಲೂ ಕಂಡು ಬಂದಿಲ್ಲ. ಆದರೆ, ಸ್ನೇಹಿತರು, ಸಿನಿರಂಗದ ಮಿತ್ರರು, ಹಿತೈಷಿಗಳು ಅಭಿಗೆ ವಿಶ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ.
ಅಂತೆಯೇ ಅಭಿಯ ಹಿರಿಯಣ್ಣನಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ”ನನ್ನ ಪ್ರೀತಿಯ ಅಭಿಷೇಕ್ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ” ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ.
ನನ್ನ ಪ್ರೀತಿಯ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ👍 pic.twitter.com/JZkv1ocKhx
— Darshan Thoogudeepa (@dasadarshan) October 3, 2019