ಬೆಂಗಳೂರು : ರಾಜ್ಯದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ ಹೆಸರಿನಲ್ಲಿ ಫೈಟ್ ಹೆಚ್ಚಾಗಿದೆ. ಬಿಜೆಪಿಯವರು ಉರಿಗೌಡ ಹಾಗೂ ದೊಡ್ಡನಂಜೇಗೌಡರು ಇದ್ದರು ಎಂಬ ವಾದ ಮಾಡಿದರೆ, ಕಾಂಗ್ರೆಸ್ ನಾಯಕರು ಇದೊಂದು ಬಿಜೆಪಿ ಕಾಲ್ಪನಿಕ ಪಾತ್ರಗಳು ಎಂದು ವಾದ ಮಾಡುತ್ತಿದ್ದಾರೆ.
ಇದೀಗ ಉರಿಗೌಡ ಹಾಗೂ ದೊಡ್ಡನಂಜೇಗೌಡರ ಬಗ್ಗೆ ಉಲ್ಲೇಖವಿರುವ ಪುಸ್ತಕ ಪತ್ತೆಯಾಗಿದ್ದು, ಈ ರಾಜಕೀಯ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಡಾ. ದೇಜಗೌ ಸಂಪಾದಕತ್ವದಲ್ಲಿ 2006ರಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದಿರುವ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ದೊಡ್ಡನಂಜೇಗೌಡರ ಬಗ್ಗೆ ಉಲ್ಲೇಖವಿದೆ.
ಸುವರ್ಣ ಮಂಡ್ಯದಲ್ಲಿ ಹ.ಕ. ರಾಜೇಗೌಡರು ಬರೆದಿರುವ ಲೇಖನದಲ್ಲಿ ಇದು ಉಲ್ಲೇಖವಾಗಿದೆ. ಉರಿಗೌಡ ಹಾಗೂ ದೊಡ್ಡನಂಜೇಗೌಡ ಇಬ್ಬರ ಬಗ್ಗೆಯೂ ಇದರಲ್ಲಿ ಬರೆಯಲಾಗಿದೆ. ಈ ಪುಸ್ತಕದಲ್ಲಿ, ಹೈದರಾಲಿ ಮತ್ತು ಟಿಪ್ಪು ಕಾಲದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ ಅವರ ವಿರುದ್ಧ ಸೆಟೆದು ನಿಂತವರು. ಟಿಪ್ಪುವಿನ ಧಾರ್ಮಿಕ ಮತ್ತು ಭಾಷಾ ನೀತಿಯ ಕಾರಣದಿಂದ ಉರಿಗೌಡ ಹಾಗೂ ದೊಡ್ಡನಂಜೇಗೌಡರು ತಿರುಗಿಬಿದ್ದಿದ್ದರು.
ಇದನ್ನೂ ಓದಿ : ಕುಮಾರಸ್ವಾಮಿ ಅನುಮಾನ ಬಗೆಹರಿಸೋಣ ಎಂದ ಆರ್. ಅಶೋಕ್
ಟಿಪ್ಪು ಆಡಳಿತದಲ್ಲಿ ಮುಸಲ್ಮಾನರನ್ನೇ ನೇಮಿಸಿದ್ದು, ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದರು. ಇದಕ್ಕಾಗಿ ಮಂಡ್ಯ ಪ್ರದೇಶದ ಗೌಡರು ಟಿಪ್ಪುವಿನ ವಿರುದ್ಧ ತಿರುಗಿ ಬಿದ್ದಿದ್ದರು ಎಂದು ಉಲ್ಲೇಖಿಸಲಾಗಿದೆ.