Wednesday, January 15, 2025

ಮಹಾಗೋಡೆ ವೈಭವ ನೆನಪಿಸಿದ ‘ವಾಲ್​’ ಔಟ್​..!

ಕನ್ನಡಿಗ ಮಯಾಂಕ್ ಅಗರ್​ ವಾಲ್ ಆಟಕ್ಕೆ ಹರಿಣಗಳು ಹೈರಾಣಾಗಿದ್ದಾರೆ. ಎರಡು ದಿನಗಳ ಕಾಲ ನೆಲಕಚ್ಚಿ ಆಡಿದ ಮಯಾಂಕ್ ಅಗರ್​​ವಾಲ್​ ಕನ್ನಡಿಗರೇ ಆದ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ವೈಭವವನ್ನು ನೆನಪಿಸಿದರು.
ವಿಶಾಖಪಟ್ಟಣದ ಡಾ. ವೈ.ಎಸ್​ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​​ನಲ್ಲಿ ಸದ್ಯ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳದ್ದೇ ದರ್ಬಾರು. ಅದರಲ್ಲೂ ಕನ್ನಡಿಗ ಮಯಾಂಕ್ ಅಗರ್​ವಾಲ್​ ಅವರು ಎರಡೂ ದಿನಗಳ ಕಾಲ ಹರಿಣಗಳ ಬೆವರಿಳಿಸಿದರು. ‘ವಾಲ್​’ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳು ಬೆವರಿ ಬೆಂಡಾದರು.
ಮೊದಲದಿನವಾದ ಬುಧವಾರ ರೋಹಿತ್ ಶರ್ಮಾ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ್ದ ಅಗರ್​ವಾಲ್ ಇಂದೂ ಕೂಡ ಹಿಟ್​ ಮ್ಯಾನ್ ಜೊತೆ ಆಟ ಮುಂದುವರೆಸಿದರು. ನಿನ್ನೆ 84ರನ್ ಮಾಡಿದ್ದ ಅಗರ್​ವಾಲ್ ಇಂದು ಸೆಂಚುರಿ ಪೂರೈಸಿದ್ದು ಮಾತ್ರವಲ್ಲದೆ ಆ ಸ್ಕೋರ್ ಅನ್ನು ಡಬಲ್ ಸೆಂಚುರಿಯಾಗಿ ಪರಿವರ್ತಿಸಿಕೊಂಡರು.
ರಾಹುಲ್ ದ್ರಾವಿಡ್​ ಆಟವನ್ನು ನೆನಪು ಮಾಡಿಕೊಟ್ಟ ಅಗರ್​ ವಾಲ್ ಚೊಚ್ಚಲ ಡಬಲ್ ಸೆಂಚುರಿ ಸಿಡಿಸಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 215ರನ್​ ಮಾಡಿದ್ದ ಅವರು ಎಲ್ಗರ್​ ಬೌಲಿಂಗ್​ನಲ್ಲಿ ಡಿ.ಪೀಡ್ಟ್​ಗೆ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿದ್ರು. ‘ವಾಲ್​’ ಆಟದಲ್ಲಿ 23 ಫೋರ್ ಹಾಗೂ 6 ಸಿಕ್ಸರ್ ಗಳಿದ್ದವು.
ಇನ್ನು ಮೊದಲ ಬಾರಿಗೆ ಟೆಸ್ಟ್​​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (176) ಕೂಡ ಅದ್ಭುತ ಆಟವಾಡಿ ತಾನು ಟಿ20, ಒಡಿಐಗೆ ಮಾತ್ರವಲ್ಲ ಟೆಸ್ಟ್​ಗೂ ಬೇಕಿದ್ದೇನೆ ಅಂತ ಪ್ರೂವ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES