ವಿಶಾಖಪಟ್ಟಣ : ಕನ್ನಡಿಗರ ಮಯಾಂಕ್ ಅಗರ್ವಾಲ್ ಆಟಕ್ಕೆ ದಕ್ಷಿಣ ಆಫ್ರಿಕಾ ಆಟಗಾರರು ಫುಲ್ ಸುಸ್ತಾಗಿದ್ದಾರೆ.
ಡಾ. ವೈ.ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಮ್ಯಾಚ್ನ ಎರಡನೇ ದಿನವಾದ ಇಂದೂ ಕೂಡ ಭಾರತೀಯ ಬ್ಯಾಟ್ಸ್ಮನ್ಗಳದ್ದೇ ಕಾರುಬಾರು. 202ರನ್ಗಳಿಂದ ಅಜೇಯ ಜೊತೆಯಾಟ ಮುಂದುವರೆಸಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ತ್ರಿಶತಕದ ಜೊತೆಯಾಟವಾಡಿದ್ರು, ಈ ಜೋಡಿ ಇನ್ನಿಂಗ್ಸ್ ಆರಂಭಿಸಿದ್ದು ಇದೇ ಮೊದಲು. ಮೊದಲ ಮ್ಯಾಚ್ನಲ್ಲೇ ಯಶಸ್ವಿ ಜೊತೆಯಾಟ ನಿಭಾಯಿಸಿತು. ತಂಡದ ಮೊತ್ತ 317ರನ್ ಆಗಿದ್ದಾಗ ದ್ವಿಶತಕದತ್ತ ದಾಪುಗಾಲು ಇಡುತ್ತಿದ್ದ ರೋಹಿತ್ ಶರ್ಮಾ (176) ಔಟಾದ್ರು. ಬಳಿಕ ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (6) ವಿಫಲರಾದರು.
ಪೂಜಾರ ಔಟಾದ ಬಳಿಕ ಕನ್ನಡಿಗ ಅಗರ್ವಾಲ್ ಅವರನ್ನು ಜೊತೆಯಾದ ಕ್ಯಾಪ್ಟನ್ ಕೊಹ್ಲಿ ಆಟ 20ರನ್ಗೆ ಮುಕ್ತಾಯವಾಯ್ತು. ಆದರೆ. ಅಗರ್ವಾಲ್ ಮಾತ್ರ ವಾಲ್ (ಗೋಡೆ)ಯಂತೆ ಗಟ್ಟಿಯಾಗಿ ನಿಂತಿದ್ದಾರೆ. ಸದ್ಯ 336 ಬಾಲ್ಗಳಲ್ಲಿ 181ರನ್ ಮಾಡಿರುವ ಅಗರ್ವಾಲ್ ದ್ವಿಶತಕದತ್ತ ಮುನ್ನುಗ್ಗಿದ್ದಾರೆ.
ಕನ್ನಡಿಗ ಅಗರ್ ‘ವಾಲ್’ ಆಟಕ್ಕೆ ಸೌತ್ ಆಫ್ರಿಕಾ ಫುಲ್ ಸುಸ್ತು..!
TRENDING ARTICLES