Saturday, November 23, 2024

ಆಯ್ಕೆದಾರರ ಪ್ಲಾನ್​ ಉಲ್ಟಾ ಪಲ್ಟಾ ಮಾಡಿದ ರಾಹುಲ್​, ರೋಹಿತ್​..!

ಕ್ರೀಡೆ ಅನ್ನೋದೇ ಹಾಗೆ..ಯಾರು? ಯಾವಾಗ? ಉತ್ತಮ ಆಟವಾಡ್ತಾರೆ ಅನ್ನೋದನ್ನು ಹೇಳೋಕಾಗಲ್ಲ. ದೇಶೀಯ ಟೂರ್ನಿಗಳಲ್ಲಿ ಉತ್ತಮ ಆಟವಾಡಿ ರಾಷ್ಟ್ರ ತಂಡದಲ್ಲಿ ಸ್ಥಾನ ಪಡೆದ ಬಹುತೇಕ ಆಟಗಾರರು. ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಲು ಪದೇ ಪದೇ ಎಡವಿ. ಸಿಕ್ಕ ಅವಕಾಶವನ್ನು ಕೈಚೆಲ್ಲುತ್ತಾರೆ. ಅದೇರೀತಿ ಟೀಮ್ ಇಂಡಿಯಾದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲ ಬಲ್ಲ ಆಟಗಾರರಲ್ಲಿ ಒಬ್ಬರಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ತಂಡದಿಂದ ಗೇಟ್ ಪಾಸ್ ಪಡೆದಿರುವುದು ಗೊತ್ತೇ ಇದೆ.
ರಾಹುಲ್​ ವೈಪಲ್ಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಅವರ ಬದಲಿಗೆ ರೋಹಿತ್ ಶರ್ಮಾಗೆ ಮಣೆ ಹಾಕಲಾಗಿದೆ. ಒಡಿಐ, ಟಿ20ಯಲ್ಲಿ ಅಬ್ಬರಿಸುತ್ತಿರು ರೋಹಿತ್ ಟೆಸ್ಟ್​ನಲ್ಲೂ ಉತ್ತಮ ಆರಂಭ ನೀಡುತ್ತಾರೆ ಎಂಬ ನಿರೀಕ್ಷೆಯಿಂದ ರಾಹುಲ್​ರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ಬಿಸಿಸಿಐ ಆಯ್ಕೆ ಸಮಿತಿ ತಮ್ಮ ಈ ನಿರ್ಧಾರ ತಪ್ಪೇನೋ ಅಂತ ಟೆಸ್ಟ್ ಸರಣಿಗೂ ಮುನ್ನವೇ ಯೋಚಿಸುವಂತಾಗಿದೆ. ಯಾಕಂದ್ರೆ ದ.ಆಫ್ರಿಕಾ ವಿರುದ್ಧದ ಮ್ಯಾಚ್​ಗೂ ಮುನ್ನ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರೆ, ರೋಹಿತ್ ನಿರಾಸೆ ಮೂಡಿಸಿದ್ದಾರೆ..!
ಹೌದು, ಒಂದೆಡೆ ಟೀಮ್ ಇಂಡಿಯಾ ಟೆಸ್ಟ್ ತಂಡದಿಂದ ಗೇಟ್​​ಪಾಸ್ ಪಡೆದಿರೋ ಕೆ.ಎಲ್​ ರಾಹುಲ್​ ವಿಜಯ್​ ಹಜಾರೆ ಟ್ರೋಫಿಯ ಗ್ರೂಪ್​​ ಎ ವಿಭಾಗದ ಮ್ಯಾಚ್​​​ನಲ್ಲಿ ಕೇರಳ ವಿರುದ್ಧ ಸೆಂಚುರಿ ಬಾರಿಸಿದ್ದಾರೆ. 122 ಬಾಲ್​ಗಳಲ್ಲಿ 10 ಫೋರ್, 4 ಸಿಕ್ಸರ್​​ ಮೂಲಕ ರಾಹುಲ್ 131ರನ್​ ಗಳಿಸಿ ತನ್ನನ್ನು ಸೌತ್ ಆಫ್ರಿಕಾ ವಿರುದ್ಧದ ಮ್ಯಾಚ್​​ಗೆ ಕೈ ಬಿಟ್ಟು ತಪ್ಪು ಮಾಡಿದ್ರಿ ಅನ್ನೋ ಸಂದೇಶ ನೀಡಿದ್ದಾರೆ.
ಆದರೆ, ಅತ್ತ ರೋಹಿತ್ ಶರ್ಮಾ ಸೌತ್​ ಆಫ್ರಿಕಾ ವಿರುದ್ಧದ ಪ್ರಾಕ್ಟಿಸ್​ ಮ್ಯಾಚ್​ನಲ್ಲಿ ಶೂನ್ಯ ಸುತ್ತಿದ್ದಾರೆ..! ರೋಹಿತ್,ರಾಹುಲ್​ರಿಂದ ಬಂದ ಈ ಉಲ್ಟಾ ಪಲ್ಟಾ ಆಟ ನೆಟ್ಟಿಗರಿಗಂತೂ ಫುಲ್​ ಮಿಲ್ಸ್​ ನೀಡಿದಂತಾಗಿದೆ. ಓ ದೇವರೇ ಬಿಸಿಸಿಐ ಆಯ್ಕೆ ಸಮಿತಿ ಯಾರನ್ನು ಸೆಲೆಕ್ಟ್​ ಮಾಡುವುದು ಅನ್ನೋ ತಲೆನೋವಿನಲ್ಲಿದೆ. ಹೊಸ ಓಪನಿಂಗ್ ಪ್ರಯೋಗ ಕೂಡ ಫ್ಲಾಪ್ ಆಗಿದೆ. ರೋಹಿತ್​ ಶರ್ಮಾ ಡಬಲ್​ ಸೆಂಚುರಿಗೆ ಕೇವಲ 200ರ್​ ಕಡಿಮೆ ಆಯ್ತು ಅಂತೆಲ್ಲಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

RELATED ARTICLES

Related Articles

TRENDING ARTICLES