ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಚುನಾವಣೆ ಫೀವರ್ ಜೊತೆಗೆ ಮತ್ತೆ ಧರ್ಮ ದಂಗಲ್ ಶುರುವಾಗಿದೆ. ಈ ಬಾರಿ ಧರ್ಮ ದಂಗಲ್ ಗೆ ವೇದಿಕೆಯಾಗಿರುವುದು ದರ್ಗಾ v/S ದೇವಾಲಯ.
ಹೌದು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೊಂದು ದರ್ಗಾ V/S ದೇವಾಲಯ ದಂಗಲ್ ಶುರುವಾಗಿದೆ. ಚಿಕ್ಕಮಗಳೂರು ತಾಲೂಕಿನ ಮಹಜಿದ್ ಗ್ರಾಮದಲ್ಲಿರುವ ಪುರಾತನ ದರ್ಗಾದ ವಿರುದ್ಧ ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿದ್ದಾರೆ.
ಇದು ದರ್ಗಾವಲ್ಲ, ದೇವಾಲಯ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಚಂದ್ರಮೌಳೇಶ್ವರ ದೇವಾಲಯ ಎಂದು ಪಟ್ಟು ಹಿಡಿದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಗಿರಿ ಸ್ವಾಮಿ ದರ್ಗಾದ ವಿಚಾರದಲ್ಲೂ ಇದೇ ರೀತಿಯ ಆಕ್ರೋಶ ಭುಗಿಲೆದ್ದಿತ್ತು. ಈಗ ಅದೇ ಮಾದರಿಯಲ್ಲಿ ಮತ್ತೊಂದು ವಿವಾದ ಎದ್ದಿದೆ.
ಗುಂಬಜ್ ಕಾಮಗಾರಿಗೆ ವಿರೋಧ
ಮಹಜಿದ್ ಗ್ರಾಮದಲ್ಲಿರುವ ಪುರಾತನ ಹಜರತ್ ಸೈಯದ್ ಬಾದ್ ಷಾ ದರ್ಗಾ ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಿದೆ. ದರ್ಗಾದ ಒಳಗಿರುವ ಪುರಾತನ ಕಲ್ಲಿನ ಕಂಬದಲ್ಲಿ ಹೂವಿನ ಚಿತ್ರಗಳ ಕೆತ್ತನೆ ಮಾಡಲಾಗಿದೆ. ಇದು ನೋಡಲು ಸಂಪೂರ್ಣ ಹಿಂದೂ ದೇವಾಲಯದ ಮಾದರಿಯಲ್ಲಿದೆ. ಹೀಗಾಗಿ ದರ್ಗಾದ ನವೀಕರಣ, ಗುಂಬಜ್ ಕಾಮಗಾರಿಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಹಿಂದೂ ದೇವಾಲಯದ ಕುರುಹುಗಳಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ದರ್ಗಾದ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.