ಬೆಂಗಳೂರು : ಮುತ್ಸದ್ದಿಯ ಕಣ್ಣು ಮುಂದಿನ ಭವಿಷ್ಯದ ಮೇಲಿರುತ್ತೆ, ಧಾರವಾಡ ಐಐಟಿ(IIT) ಕೂಡ ಮುತ್ಸದ್ದಿಯ ಕೊಡುಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಐಐಟಿ(IIT) ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ, ಸಮಾರಂಭವನ್ನುದ್ದೇಶಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಮೇನಿಯಾ : ಜನರಿಗೆ ಏನೆಲ್ಲಾ ಊಟದ ವ್ಯವಸ್ಥೆಯಿದೆ ಗೊತ್ತಾ?
ಪ್ರಧಾನಿ ಮೋದಿ ದೂರದೃಷ್ಟಿಯನ್ನು ಬೊಮ್ಮಾಯಿ ಕೊಂಡಾಡಿದರು. ಮುಂದಿನ ಜನಾಂಗಕ್ಕಾಗಿ ಪ್ರಧಾನಿ ದೇಶ ಕಟ್ಟುತ್ತಿದ್ದಾರೆ. ಪ್ರಧಾನಿ ಮೋದಿ ಈ ದೇಶದ ಧೀಮಂತ ನಾಯಕ. ನವ ಕರ್ನಾಟಕ ನಿರ್ಮಾಣದ ಶಕ್ತಿ ಪ್ರಧಾನಿ ಮೋದಿಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ
ಕರ್ನಾಟಕದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರದ ಕೊಡುಗೆ ಅಪಾರ ಎಂದು ಸಿಎಂ ಕೊಂಡಾಡಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಬೇಕಿದೆ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರದಾನಿ ಮೋದಿ ಸರ್ಕಾರದ ಕಾಣಿಕೆ ಎಂದು ಹೇಳಿದ್ದಾರೆ.
ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ
ಪ್ರಧಾನಿ ಮೋದಿ ಅವರು ಇದೇ ವೇಳೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಉದ್ಘಾಟನೆ ಮಾಡಿದ್ದಾರೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆಗೊಂಡಿರುವ ಅತಿ ಉದ್ದದ ಪ್ಲಾಟ್‌ಫಾರಂ ಇದಾಗಿದ್ದು, 1,507 ಮೀಟರ್ ಉದ್ದದ ಪ್ಲಾಟ್‌ಫಾರಂವನ್ನೊಳಗೊಂಡಿದೆ. ಇಷ್ಟು ದಿನ 4 ಪ್ಲಾಟ್‌ಫಾರಂ ಹೊಂದಿದ್ದ ಹುಬ್ಬಳಿ ರೈಲ್ವೆ ನಿಲ್ದಾಣದಲ್ಲಿ ಈಗ ಮತ್ತೆರಡು ಪ್ಲಾಟ್‌ಫಾರಂ ಆರಂಭವಾಗುತ್ತಿದ್ದು, ಒಟ್ಟು 8 ಪ್ಲಾಟ್‌ಫಾರಂಗಳು ಈಗ ಪ್ರಯಾಣಿಕರಿಗೆ ಲಭ್ಯವಿದೆ.
ಹುಬ್ಬಳಿ ರೈಲ್ವೆ ನಿಲ್ದಾಣಕ್ಕೂ ಮುನ್ನ ಉತ್ತರ ಪ್ರದೇಶದ ಗೋರಖ್‌ಪುರ್ ರೈಲ್ವೆ ನಿಲ್ದಾಣ ಅತಿ ಉದ್ದದ ಪ್ಲಾಟ್‌ಫಾರಂ ಹೊಂದಿತ್ತು. ಇದೀಗ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಹೊಂದಿದ ಹೆಗ್ಗಳಿಕೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ಪಡೆಯುತ್ತಿದೆ. ನೈರುತ್ವ ರೈಲ್ವೆ ವಲಯದಿಂದ ಈ ಅತಿ ದೊಡ್ಡ ಪ್ಲಾಟ್‌ಫಾರಂ ಸ್ಥಾಪನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಅರವಿಂದ ಬೆಲ್ಲದ್ ಹಾಗೂ ಇನ್ನಿತರ ಬಿಜೆಪಿ ನಾಯಕರು ಸಾಥ್ ನೀಡಿದರು.