Saturday, November 23, 2024

ಹುಬ್ಬು-ರೆಪ್ಪೆ ಸೌಂದರ್ಯ ಹೆಚ್ಚಿಸಿಕೊಳ್ಳಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್

ಬೆಂಗಳೂರು : ಹೆಣ್ಣಿನ ಕಣ್ಣೋಟಕ್ಕೆ ಮಾರು ಹೋಗದವರೇ ಇಲ್ಲ! ಯಾಕಂದ್ರೆ, ಹೆಣ್ಣಿನ ಸೌಂದರ್ಯ ಅಡಗಿರುವುದೇ ಕಣ್ಣಲ್ಲಿ. ಅದರಲ್ಲೂ ಕಣ್ಣಿನ ರೆಪ್ಪೆ ಹಾಗೂ ಹುಬ್ಬು ಎಂದರೆ ಅತಿಶಯೋಕ್ತಿಯಲ್ಲ.

ಹೌದು, ಮಹಿಳೆಯರು ತಮ್ಮ ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಪ್ರಾಮುಖ್ಯತೆ ಕಣ್ಣಿನ ರೆಪ್ಪೆ ಹಾಗೂ ಹುಬ್ಬಿ ಅಂದಕ್ಕೂ ಇರುತ್ತದೆ. ಮುಖದ ಆಕಾರಕ್ಕೆ ತಕ್ಕಂತೆ ಹುಬ್ಬಿಗೆ ಶೇಪ್ ನೀಡುತ್ತಾರೆ.

ಹುಬ್ಬು ದಪ್ಪವಾಗಿ ಮತ್ತು ಉತ್ತಮ ಶೇಪ್ ಇದ್ದರೆ ನೋಡುಗರನ್ನು ಸೆಳೆಯುತ್ತದೆ. ಕಣ್ಣಿನ ನೋಟ ಆಕರ್ಷಕವಾಗಿದ್ದಷ್ಟು ಮುಖದ ಸೌಂದರ್ಯ ಚೆನ್ನಾಗಿ ಕಾಣಿಸುತ್ತದೆ. ಮಹಿಳೆಯರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸತ್ತಾರೆ. ಕೆಲವರು ತಮ್ಮ ಇಷ್ಟದಂತೆ ರೆಪ್ಪೆ ಹಾಗೂ ಹುಬ್ಬು ಇಲ್ಲದಿದ್ರೆ ಹೆಚ್ಚು ಚಿಂತಿಸುತ್ತಾರೆ. ಅಂಥವರು ಚಿಂತಿಸಬೇಕಾಗಿಲ್ಲ. ಮನೆಯಲ್ಲೇ ರೆಪ್ಪೆ ಹಾಗೂ ಹುಬ್ಬಿನ ಸೌಂದರ್ಯಕ್ಕೆ ಕೆಲವು ಟಿಪ್ಸ್ ಮೊರೆ ಹೋಗಬಹುದು. ಆ ಐಡಿಯಾಗಳು ಇಲ್ಲಿವೆ ನೋಡಿ.

ಇದನ್ನೂ ಓದಿ : ಹೀಗೆ ಮಾಡಿದ್ರೆ.. ಕೂದಲು ಉದುರುವಿಕೆ ತಕ್ಷಣ ನಿಂತು ಹೋಗುತ್ತೆ!

ಸೌಂದರ್ಯ ಹೆಚ್ಚು ಸರ್ಕಸ್

ಮುಖದ ಸೌಂದರ್ಯ ಹೆಚ್ಚಿಸುವುದಕ್ಕೆ ಸಾಕಷ್ಟು ಸರ್ಕಸ್ ಮಾಡುತ್ತೇವೆ. ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ನಮ್ಮ ಕಣ್ಣು ಅಷ್ಟೇ ಮುಖ್ಯ. ಹುಬ್ಬು ಮತ್ತು ರೆಪ್ಪೆಯ ಕಾಳಜಿಯೂ ಮುಖ್ಯ. ಐಬ್ರೋ ನೋಡಲು ಸುಂದರವಾಗಿದ್ದರೆ ಸೌಂದರ್ಯ ದುಪ್ಪಟ್ಟಾಗುತ್ತೆ. ಹೀಗಾಗಿ, ಮಹಿಳೆಯರು ಟ್ರೀಟ್ ಮೆಂಟ್ ಗಳ ಮೋರೆ ಹೋಗ್ತಾರೆ. ಇದು ಅಷ್ಟು ಸೂಕ್ತವಲ್ಲ ಎನ್ನುವುದು ವೈದ್ಯರ ಸಲಹೆ.

ಹರಳಣ್ಣೆಯಿಂದ ಸೌಂದರ್ಯ ದುಪ್ಪಟ್ಟು

ಮನೆಯಲ್ಲಿ ಸಾಮಾನ್ಯವಾಗಿ ಹರಳಣ್ಣೆ ಇದ್ದೇ ಇರುತ್ತದೆ. ನಮ್ಮ ದೇಹ ತಂಪಾಗಿರಸಲು ಸಹ ಇದು ಸಹಕಾರಿಯಾಗುತ್ತದೆ. ನಮ್ಮ ಕೂದಲು ದಟ್ಟವಾಗಿ ಬೆಳೆಯಲಿ ಸಹಾಯ ಮಾಡುತ್ತದೆ. ಹಿಂದಿನ ಕಾಲದಲ್ಲಿ ಕೊಬ್ಬರಿ ಎಣ್ಣೆಗಿಂತ ಹರಳೆಣ್ಣೆ ಹೆಚ್ಚಾಗಿ ಬಳಸುತ್ತಿದ್ದರು. ಅವರ ತಲೆಯ ಕೂದಲು ಬಹಳ ಸಮೃದ್ಧವಾಗಿ  ಬೆಳೆಯುತ್ತಿತ್ತು. ಹಾಗೆಯೇ, ನಮ್ಮ ಐಬ್ರೋ ಶೇಫ್ ಸರಿಪಡಿಸಿ ನಮ್ಮ ಸೌಂದರ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.

ಹರಳೆಣ್ಣೆಗೆ ವಿಟಮಿನ್ ಕ್ಯಾಪ್ಸೂಲ್ ಬಳಸಿ

ಹರಳೆಣ್ಣೆಗೆ ವಿಟಮಿನ್ ಈ ಕ್ಯಾಪ್ಸೂಲ್ ಹಾಕಿ ರಾತ್ರಿ ಮಲಗುವ ಮುನ್ನ ದಿನನಿತ್ಯ ನಮ್ಮ ಐಬ್ರೋಗೆ ಹಚ್ಚಿದರೆ ನಮ್ಮ ಐಬ್ರೋ ಶೇಫ್ ಬರುತ್ತದೆ. ಹಾಗೆಯೇ, ನಮ್ಮ ರೆಪ್ಪೆ ಉದ್ದ ಇರಬೇಕು ಎಂದು ಸಾಕಷ್ಟು ಜನರು ಬಯಸುತ್ತಾರೆ. ಅವರು ಸಹ ಈ ಮಿಶ್ರಣವನ್ನು ಖಾಲಿಯಾಗಿರುವ ಮಸ್ಕರೋಗೆ ತುಂಬಿ ಮಲಗುವ ಮುನ್ನ ಹಚ್ಚಿದರೆ ಒಳ್ಳೆದು.

  • ಸಾಹಿತ್ಯ, ಪವರ್​ ಟಿವಿ

RELATED ARTICLES

Related Articles

TRENDING ARTICLES