Sunday, November 24, 2024

ಎಚ್ಚರ..! H3N2ಗೆ ದೇಶದಲ್ಲಿ ಎರಡು ಬಲಿ

ಬೆಂಗಳೂರು : ಕರ್ನಾಟಕ ಸೇರಿದಂತೆ H3N2ಗೆ ದೇಶದಲ್ಲಿ ಮೊದಲ ಬಾರಿಗೆ ಎಚ್3ಎನ್2 ವೈರಸ್ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

ಕರ್ನಾಟಕದಲ್ಲಿ ಒಬ್ಬ ವ್ಯಕ್ತಿ ಹಾಗೂ ಹರಿಯಾಣ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕರ್ನಾಟಕದ ಹಾಸನ ಜಿಲ್ಲೆಯ 82 ವರ್ಷದ ಈರೇಗೌಡ ಎಚ್3ಎನ್2 ವೈರಸ್ ಗೆ ಬಲಿಯಾಗಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಅವರು ಮಾಹಿತಿ ನೀಡಿದ್ದು, ಈರೇಗೌಡ (82)ಅವರ ಸಾವಿನ ಬಗ್ಗೆ ಖಚಿತಪಡಿಸಿದ್ದಾರೆ. ಫೆಬ್ರವರಿ 24ರಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಈರೇಗೌಡ ಆರು ದಿನಗಳ ನಂತರ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಇನ್ಪ್ಯೂಯೆನ್ಸ ತರಹದ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ಈರೇಗೌಡರನ್ನು ಆಸ್ಪತ್ರೆಗೆ ಕರೆ ತರಲಾಯಿತು. ಅಧಿಕ ತಕ್ತದೊತ್ತಡ ಮತ್ತು ಮಧುಮೇಹದಂತಹ ಕೊಮೇರ್ಬಿಡಿಗಳನ್ನು ಅವರು ಹೊಂದಿದ್ದರು ಎನ್ನಲಾಗಿದೆ.

ಎಲ್ಲಾ ಸಕಾರಾತ್ಮಕ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಆರೋಗ್ಯ ಅಧಿಕಾರಿಗಳು ಮೃತ ವ್ಯಕ್ತಿಯ ಎಲ್ಲಾ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳನ್ನು ಸಮೀಕ್ಷೆ ಮಾಡಿದ್ದಾರೆ. ಆದರೂ, ಈವರೆಗೆ ಅವರ ಪತ್ನಿ ಸೇರಿದಂತೆ ಎಲ್ಲರಿಗೂ ವೈರಸ್ ನೆಗೆಟೀವ್ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

RELATED ARTICLES

Related Articles

TRENDING ARTICLES