ಬೆಂಗಳೂರು : ಮಂಡ್ಯ ಪಕ್ಷೇತರ ಸಂಸದೆ ಸ್ವಾಭಿಮಾನಿ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಮರಳುವ ಮೂಲಕ ಬಿಜೆಪಿ (BJP) ಅಥವಾ ಕಾಂಗ್ರೆಸ್ (Congress) ಪಕ್ಷ ಸೇರುವ ಬಗ್ಗೆ ಇನ್ನೂ ಕೆಲವೇ ಗಂಟೆಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.
ಹೌದು, ಸಮಸದೆ ಸುಮಲತಾ ಅವರೇ ಖುದ್ದು ಕೆಲವೇ ಹೊತ್ತಿನಲ್ಲಿ ಈ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಆ ಮೂಲಕ ಕಳೆದ ಹಲವು ತಿಂಗಳಿನಿಂದ ಕುತೂಹಲ ಮೂಡಿಸಿರುವ ತಮ್ಮ ರಾಜಕೀಯ ನಡೆಯ ಬಿಗ್ ಸೀಕ್ರೆಟ್ ಬಹಿರಂಗವಾಗಲಿದೆ.
ಸುಳಿವು ಕೊಟ್ಟ ಆಪ್ತ ಸಚ್ಚಿದಾನಂದ
ಸುಮಲತಾ ನಿರ್ಧಾರದ ಬಗ್ಗೆ ಆಪ್ತ ಸಚ್ಚಿದಾನಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಏನೇ ಮಾತನಾಡಿದರೂ ಅದು ಉಪ್ಪೇಕ್ಷೆಯಾಗುತ್ತದೆ. ಹೀಗಾಗಿ, ಎಲ್ಲ ಊಹಾಪೋಹಕ್ಕೆ ಇಂದು ಅವರೇ ತೆರೆ ಎಳೆಯುತ್ತಾರೆ’ ಎಂದು ಹೇಳಿದ್ದಾರೆ.
ರೆಬೆಲ್ ಲೇಡಿ ತೀರ್ಮಾನ ಔಟ್!
ಕಳೆದ ಲೋಕಸಭಾ ಚುನಾವಣೆ ಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಸ್ವಾಭಿಮಾನದ ಹೆಸರಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ರಾಜಕೀಯ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಾಲ್ಕು ವರ್ಷಗಳಿಂದಲೂ ಯಾವುದೇ ಪಕ್ಷ ಸೇರದೆ ಸ್ವತಂತ್ರವಾಗಿಯೇ ಉಳಿದಿದ್ದ ರೆಬೆಲ್ ಲೇಡಿ, ಇದೀಗ ತೀರ್ಮಾನವೊಂದಕ್ಕೆ ಬಂದಿದ್ದಾರೆ.
2023ರ ವಿಧಾನಸಭಾ ಚುನಾವನೆ ಸಮಯದಲ್ಲೇ ಮಂಡ್ಯ ರಾಜಕೀಯದ ಮೇಲೆ ಸಂಸದೆ ಸುಮಲತಾ ಬಿಜೆಪಿ ಸೇರ್ತಾರೆ. ಈ ಮೂಲಕ ಬಿಜೆಪಿಗೆ ಬಲ ತುಂಬ್ತಾರೆ ಎಂಬ ಟಾಕ್ ಜೋರಾಗಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಹೊತ್ತಲ್ಲೇ ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದೆ.
ಒಟ್ನಲ್ಲಿ, ಇಂದು ಮಧ್ಯಾಹ್ನ 12 ಗಂಟೆಗೆ ಮಂಡ್ಯದ ತಮ್ಮ ನಿವಾಸದಲ್ಲಿ ಸುಮಲತಾ ಸುದ್ದಿಗೋಷ್ಠಿ ಕರೆದಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.