ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿ ಆರೋಪದಡಿ ಸೈಬರ್ ಕ್ರೈಂ ಪೊಲೀಸರು ರಾಕೇಶ್ ಅಲಿಯಾಸ್ ವಿರಾಟ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ರಾಕೇಶ್ ಪೈಲ್ವಾನ್ ಸಿನಿಮಾ ರಿಲೀಸ್ ಆದ ದಿನವೇ ಸಂಪೂರ್ಣ ಸಿನಿಮಾವನ್ನು ಪೈರಸಿ ಮಾಡಿ ತನ್ನ ಫೇಸ್ಬುಕ್ನಲ್ಲಿ ಲಿಂಕ್ ಹಾಕಿಕೊಂಡಿದ್ದ. ಅಲ್ಲದೇ ಯಾರಿಗಾದ್ರು ಸಿನಿಮಾ ಬೇಕಿದ್ರೆ ನಂಗೆ ಮೆಸೇಜ್ ಮಾಡಿ ಅಂತ ಸ್ಟೇಟಸ್ ಕೂಡ ಹಾಕಿಕೊಂಡಿದ್ದ ಎನ್ನಲಾಗಿದೆ.
ಪೈಲ್ವಾನ್ ರಿಲೀಸ್ ಆಗುತ್ತಿದ್ದಂತೆ ದರ್ಶನ್ ಮತ್ತು ಸುದೀಪ್ ಅಭಿಮಾನಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆದು ಬಿಟ್ಟಿತ್ತು. ಸಿಒನಿಮಾ ಪೈರಸಿ ಬಗ್ಗೆ ನಿರ್ಮಾಪಕಿ ಸ್ವಪ್ನ ಸೈಬರ್ ಕ್ರೈಂ ಪೊಲೀಸ್ರಿಗೆ ಕಂಪ್ಲೆಂಟ್ ಕೊಟ್ಟಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ರಾಕೇಶ್ ಅಲಿಯಾಸ್ ರಾಕೇಶ್ ವಿರಾಟ್ ಬೆಂಗಳೂರಿನ ನೆಲಮಂಗಲ ಮೂಲದವನಾಗಿದ್ದು, ಸೋಂಪುರ ಹೋಬಳಿಯ ಇಮಚೇನಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.
ಪೈಲ್ವಾನ್ ಸಿನಿಮಾ ಪೈರಸಿ ಆರೋಪಿ ಅರೆಸ್ಟ್ – ಆತ ಯಾರು? ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
TRENDING ARTICLES