ನೆನಪಿರಬಹುದು.. ಇವತ್ತಿಗೆ ಸರಿಯಾಗಿ 12 ವರ್ಷಗಳ ಹಿಂದೆ…ಯುವರಾಜ್ ಸಿಂಗ್ ಸಿಡಿದೆದ್ದಿದ್ರು…ಯುವಿ ಆರ್ಭಟಕ್ಕೆ ಇಂಗ್ಲೆಂಡ್ ಆಟಗಾರರು ಗಢಗಢ ನಡುಗಿದ್ರು. ಅದರಲ್ಲೂ ವೇಗಿ ಸ್ಟುವರ್ಟ್ ಬ್ರಾಡ್ಗಂತೂ ಆ ದಿನ ನರಕ ದರ್ಶನ..! ಯುವಿಯ ಅಂದಿನ ಆಟವನ್ನು ನೆನೆದರೆ ಬಹುಶಃ ಬ್ರಾಡ್ ಇವತ್ತೂ ಕೂಡ ನಿದ್ರೆ ಮಾಡ್ಲಿಕ್ಕಿಲ್ಲ..!
ಹೌದು…ಅದು ಸೆಪ್ಟೆಂಬರ್ 19, 2007.. ಭಾರತೀಯ ಕ್ರಿಕೆಟ್ ಅಭಿಮಾನಿಗಳೂ ಎಂದೂ ಮರೆಯದ ಸುದಿನ..! ಚೊಚ್ಚಲ ಟಿ20 ವರ್ಲ್ಡ್ಕಪ್ನಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ವರ್ಲ್ಡ್ ರೆಕಾರ್ಡ್ ಮಾಡಿದ ದಿನವಿದು. ಡರ್ಬನ್ನಲ್ಲಿ ನಡೆದ ಸೆಮಿಫೈನಲ್ ಮ್ಯಾಚ್ನಲ್ಲಿ ಯುವರಾಜ್ ಸಿಂಗ್ ಸತತ 6 ಬಾಲ್ಗಳಲ್ಲಿ 6 ಸಿಕ್ಸರ್ ಸಿಡಿಸಿದ್ದು ಇದೇ ದಿನ..! ಆ ವಿಶ್ವ ದಾಖಲೆ ನಿರ್ಮಾಣವಾಗಿ ಇಂದಿಗೆ 12 ವರ್ಷ..!
ಅಂದು ಇಂಗ್ಲೆಂಡ್ನ ಆಲ್ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್ ಯುವರಾಜ್ ಸಿಂಗ್ರನ್ನು ಕೆಣಕಿದ್ದರು. ಅವತ್ತು ಫ್ಲಿಂಟಾಫ್ ಮಾಡಿದ ಅದೊಂದು ತಪ್ಪು ಯುವಿ ವಿಶ್ವ ದಾಖಲೆ ಮಾಡಲು ಕಾರಣವಾಯ್ತು..! ಫ್ಲಿಂಟಾಫ್ ಯುವಿಯನ್ನು ಕೆಣಕಿದ ಬಳಿಕ ಬಲಿಪಶುವಾಗಿದ್ದು ವೇಗಿ ಸ್ಟುವರ್ಟ್ ಬ್ರಾಡ್.
19 ಓವರ್ನಲ್ಲಿ ಬೌಲಿಂಗ್ಗಿಳಿದ ಸ್ಟುವರ್ಟ್ ಬ್ರಾಡ್ ಎಸೆದ ಎಲ್ಲಾ ಆರು ಎಸೆತಗಳನ್ನು ಯುವಿ ಸಿಕ್ಸರ್ ಸಿಡಿಸಿದ್ದರು. ಅದನ್ನು ಕ್ರಿಕೆಟ್ ಜಗತ್ತು ಎಂದೂ ಮರೆಲಾಗದು.
12 ವರ್ಷಗಳ ಹಿಂದಿನ ಈ ದಿನ ಯುವರಾಜ್ ಸಿಡಿದೆದ್ದಿದ್ರು…ಅವತ್ತು ಏನಾಗಿತ್ತು?
TRENDING ARTICLES