ಭಾರತ ವಿಶ್ವ ಕ್ರಿಕೆಟ್ಗೆ ಅದೆಷ್ಟೋ ಮಂದಿ ದಿಗ್ಗಜರನ್ನು ಕೊಡುಗೆಯಾಗಿ ನೀಡಿದೆ. ಟೀಮ್ ಇಂಡಿಯಾದ ಆಟಗಾರರು ವಿಶ್ವಮಟ್ಟದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ವಿಶ್ವಕ್ರಿಕೆಟನ್ನು ಭಾರತೀಯರು ಆಳಿದ್ದಾರೆ…ಆಳುತ್ತಿದ್ದಾರೆ. ಪ್ರಸ್ತುತದಲ್ಲೂ ವಿಶ್ವಕ್ರಿಕೆಟ್ನಲ್ಲಿ ಭಾರತದ ಆಟಗಾರರದ್ದೇ ಹವಾ..!
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಪೈಪೋಟಿಗೆ ಬಿದ್ದವರಂತೆ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಒಡಿಐ ಮಾತ್ರವಲ್ಲ ಟಿ20 ಫಾರ್ಮೆಟ್ನಲ್ಲೂ ಕ್ಯಾಪ್ಟನ್ ಕೊಹ್ಲಿಗೆ ಹಿಟ್ಮ್ಯಾನ್ ಶರ್ಮಾ ಸವಾಲು…! ಈ ಇಬ್ಬರು ಸ್ಟಾರ್ ಆಟಗಾರರ ನಡುವೆ ಆರೋಗ್ಯಕರ ಪೈಪೋಟಿ ಇದ್ದು, ಮೊದಲ ಎರಡು ಸ್ಥಾನಗಳಲ್ಲಿ ನಮ್ಮ ನಾಯಕ, ಉಪನಾಯಕರದ್ದೇ ರಾಜ್ಯಭಾರ ಅನ್ನೋದು ಗುಡ್ ನ್ಯೂಸ್.
ನಿನ್ನೆ ಮೊಹಾಲಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಮ್ಯಾಚ್ನಲ್ಲಿ ಕ್ಯಾಪ್ಟನ್ ಕೊಹ್ಲಿ 52 ಬಾಲ್ಗಳಲ್ಲಿ 72ರನ್ ಗಳಿಸಿ ಭಾರತದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊಹ್ಲಿ ಈ ರನ್ಗಳಿಕೆಯೊಂದಿಗೆ ಟಿ20ಯಲ್ಲಿ 2441ರನ್ ಗಳಿಸಿದಂತಾಗಿದೆ. ಸದ್ಯ ವಿಶ್ವ ಟಿ20ಯಲ್ಲಿ ಅತೀ ಹೆಚ್ಚು ರನ್ ಸಂಪಾದಿಸಿರುವ ಆಟಗಾರರವ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1 ಸ್ಥಾನಕ್ಕೆ ಜಿಗಿದಿದ್ದಾರೆ. 2434ರನ್ ಬಾರಿಸಿರುವ ರೋಹಿತ್ ಶರ್ಮಾ ಸೆಕೆಂಡ್ ಪ್ಲೇಸ್ನಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಕೊಹ್ಲಿಗಿಂತ ಏಳೇ ಏಳು ರನ್ ಜಾಸ್ತಿ ಮಾಡಿದ್ರೂ ಶರ್ಮಾ ಮತ್ತೆ ನಂಬರ್ 1 ಪಟ್ಟಕ್ಕೆ ವಾಪಸ್ ಆಗಲಿದ್ದಾರೆ.
ಇನ್ನು 2283ರನ್ ಗಳಿಸಿರುವ ನ್ಯೂಜಿಲೆಂಡ್ನ ಗುಪ್ಟಿಲ್ 3, 2263ರನ್ ಮಾಡಿರುವ ಪಾಕ್ನ ಶೋಯಭ್ ಮಲ್ಲಿಕ್ 4ನೇ ಸ್ಥಾನದಲ್ಲಿದ್ದಾರೆ.
ಟಿ20ಯಲ್ಲೂ ಕೊಹ್ಲಿ, ರೋಹಿತ್ರದ್ದೇ ದರ್ಬಾರು…ಇಬ್ಬರಲ್ಲಿ ಯಾರು ನಂಬರ್ 1..?
TRENDING ARTICLES