Friday, November 22, 2024

ಎಚ್ಚರ.. ಕೋವಿಡ್ ನಂತೇ ಹರಡುತ್ತೆ ‘H3N2’

ಬೆಂಗಳೂರು : ದೇಶದಲ್ಲಿ ಕೋವಿಡ್ -19 ಸೋಂಕು ಹಾಗೂ ಅದರ ರೂಪಾಂತರಿ ತಳಿಗಳು ವ್ಯಾಪಕವಾಗಿ ಹರಡಿ ಸೃಷ್ಟಿಸಿದ ಸಮಸ್ಯೆಗಳು ಒಂದೆರಡಲ್ಲ. ಇದೀಗ, ಕೊರೋನಾ ರೂಪಾಂತರಿ ಎಂದೇ ಹೇಳಲಾಗುತ್ತಿರುವ H3N2 ಸೋಂಕು ಕೋವಿಡ್-19ನಂತೆಯೇ ಹರಡುತ್ತದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಈ ಸಂಬಂಧ ಏಮ್ಸ್ ದೆಹಲಿ ಮಾಜಿ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಮಾಹಿತಿ ನೀಡಿದ್ದಾರೆ. ಇನ್ಫ್ಲುಯೆಂಜಾ ವೈರಸ್ ಎಚ್3ಎನ್2 ಕೋವಿಡ್ ನಂತೆ ಹರಡುತ್ತದೆ. ಹೀಗಾಗಿ ವಯಸ್ಸಾದವರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ಇದು ಪ್ರತಿ ವರ್ಷ ಈ ಸಮಯದಲ್ಲಿ ರೂಪಾಂತರಗಳ ಮೂಲಕ ಹರಡುತ್ತದೆ. ಹಬ್ಬ ಹರಿದಿನಗಳು ಸಮೀಪಿಸುತ್ತಿರುವುದರಿಂದ ಜನರು. ವಿಶೇಷವಾಗಿ ವಯಸ್ಸಾದವರು ಮತ್ತು ಸಹವರ್ತಿ ಕಾಯಿಲೆ ಇರುವವರು ಜಾಗರೂಕರಾಗಿರಬೇಕು ಎಂದು ಡಾ. ಗುಲೇರಿಯಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ : H3N2 : ರಾಜ್ಯಕ್ಕೆ ಹೊಸ ಗೈಡ್ ಲೈನ್ಸ್ : ಇವರಿಗೆ ಮಾತ್ರ ಅನ್ವಯ

H3N2 ಪ್ರಕರಣ ಏರಿಕೆ

ಇನ್ಫ್ಲುಯೆನ್ಸ ಪ್ರಕರಣಗಳು ನೋಯುತ್ತಿರುವ ಗಂ ಟಲು, ಕೆಮ್ಮು, ದೇಹದ ನೋವು ಮತ್ತು ಶೀತದೊಂದಿಗೆ ಜ್ವರದಿಂದ ಕಂಡುಬರುತ್ತವೆ. ವೈರಸ್ ರೂಪಾಂತರಗೊಂಡ ಕಾರಣದಿಂದ ಮತ್ತು ಅದರ ವಿರುದ್ಧ ಜನರ ರೋಗನಿರೋಧಕ ಶಕ್ತಿ ಕಡಿಮೆಯಾದ ಕಾರಣ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.

ನಾವು ಹಲವು ವರ್ಷಗಳ ಹಿಂದೆ ಎಚ್1ಎನ್1 ಸಾಂಕ್ರಾಮಿಕ ರೋಗವನ್ನು ಕಂಡಿದ್ದೇವೆ. ಆ ವೈರಸ್ ಮುಂದುವರಿದು ಈಗ H3N2 ಆಗಿದೆ ಮತ್ತು ಆದ್ದರಿಂದ, ಇದು ಸಾಮಾನ್ಯ ಇನ್ಫ್ಲು ಯೆನ್ಸ ಸ್ಟ್ರೈ ನ್ ಆಗಿದೆ. ಹೆಚ್ಚಿನ ಪ್ರಕರಣಗಳನ್ನು ನೋಡುತ್ತಿದ್ದೇ ವೆ ಏಕೆಂದರೆ ವೈರಸ್ ಸ್ಪಲ್ಪಮಟ್ಟಿಗೆ ರೂಪಾಂತರಗೊಳ್ಳುತ್ತಿದೆ. ವೈರಸ್ ವಿರುದ್ಧ ನಮ್ಮಲ್ಲಿರುವ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಜನರು ಸುಲಭವಾಗಿ ಸೋಂಕಿಗೆ ಒಳಗಾಗುತ್ತಾರೆ ಎಂದು ಡಾ. ಗುಲೇರಿಯಾ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES