ಇಂದು ಸ್ಯಾಂಡಲ್ವುಡ್ನ ಮೂವರು ಸ್ಟಾರ್ಗಳ ಹುಟ್ಟುಹಬ್ಬ. ಸಾಹಸ ಸಿಂಹ ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ ಒಂದಾದರೆ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಅವರಿಗೂ ಜನ್ಮದಿನದ ಸಂಭ್ರಮ.
ಉಪೇಂದ್ರ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯ ತಮ್ಮ ನಿವಾಸದ ಬಳಿ ಅಭಿಮಾನಿಗಳೊಂದಿಗೆ ಉಪ್ಪಿ ಖುಷಿ ಖುಷಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಬೆಳಗ್ಗಿನಿಂದಲೇ ಉಪೇಂದ್ರ ನಿವಾಸದ ಎದುರು ಸೇರಿದ ವಿವಿಧ ಊರುಗಳಿಂದ ಬಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಿದ್ರು.
ಹುಟ್ಟುಹಬ್ಬಕ್ಕಾಗಿ ಕೇಕ್, ಹೂವಿನ ಹಾರ, ವಿಶೇಷ ಉಡುಗೊರೆಗಳನ್ನು ತರ್ಬೇಡಿ. ನಿಮ್ಗೇನಾದ್ರು ಗಿಫ್ಟ್ ಕೊಡ್ಬೇಕು ಅಂತಿದ್ರೆ ಗಿಡಗಳನ್ನು ನೀಡಿ, ನಾನವುಗಳನ್ನು ಪೋಷಿಸ್ತೀನಿ ಅಂತ ಉಪೇಂದ್ರ ಹೇಳಿದ್ದರು. ಹೀಗಾಗಿ ಬಹುತೇಕ ಅಭಿಮಾನಿಗಳು ಗಿಡಗಳನ್ನು ಗಿಫ್ಟ್ ಆಗಿ ಉಪ್ಪಿಗೆ ನೀಡಿದರು.
ಇನ್ನು ಹುಟ್ಟುಹಬ್ಬದ ಪ್ರಯುಕ್ತ ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್’ ಚಿತ್ರತಂಡ ಟೀಸರ್ – ಪೋಸ್ಟರ್ ಬಿಡುಗಡೆ ಮಾಡಿತು.ಅದೇರೀತಿ ‘ಬುದ್ಧಿವಂತ 2’ ಚಿತ್ರದಲ್ಲಿನ ಡಿಫರೆಂಟ್ ಲುಕ್ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಅಭಿಮಾನಿಗಳಿಗೆ ಸಿಕ್ಕಿದೆ.
ರಿಯಲ್ ಸ್ಟಾರ್ಗೆ 51ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಗೆ ಉಪ್ಪಿ ಭರ್ಜರಿ ಗಿಫ್ಟ್
TRENDING ARTICLES