ಕ್ರಿಕೆಟ್ ಶಿಶು ಅಂತ ಕರೆಸಿಕೊಳ್ಳುವ ಅಪ್ಘಾನಿಸ್ತಾನ ಬಾಂಗ್ಲಾ ಹುಲಿಗಳ ವಿರುದ್ಧ ನಡೆದ ಏಕೈಕ ಟೆಸ್ಟ್ನಲ್ಲಿ ಐತಿಹಾಸಿಕ ಜಯ ದಾಖಲಿಸಿ ಬೀಗಿದೆ.
ಬಾಂಗ್ಲಾದ ಜೊಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಪ್ಘಾನಿಸ್ತಾನ ರಹಮತ್ ಶಾರರ ಸೆಂಚುರಿ ನೆರವಿನಿಂದ 342ರನ್ ಮಾಡಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಹುಲಿಗಳು ಅಪ್ಘನ್ ಕ್ಯಾಪ್ಟನ್ ರಶೀದ್ ಖಾನ್ ದಾಳಿಗೆ ತತ್ತರಿಸಿ 205ರನ್ಗಳಿಗೆ ಆಲ್ಔಟ್ ಆದರು.
137ರನ್ಗಳ ಮುನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘನ್ ಇಬ್ರಾಹಿಂ ಝದ್ರಾಸ್ರವರ ಹಾಫ್ ಸೆಂಚುರಿ (87)ರನ್ಗಳ ನೆರವನಿಂದ 260ರನ್ ಗಳಿಸಿತು. ಒಟ್ಟಾರೆ 397ರನ್ ಗುರಿ ಬೆನ್ನತ್ತಿದ ಬಾಂಗ್ಲಾ ತನ್ನ ಸೆಕೆಂಡ್ ಇನ್ನಿಂಗ್ಸ್ನಲ್ಲೂ ರಶೀದ್ ಖಾನ್ ದಾಳಿಗೆ ನಲುಗಿ 173ರನ್ಗಳಿಗೆ ಆಲ್ಔಟ್ ಆಯ್ತು. ಅಪ್ಘನ್ನರು ಬಾಂಗ್ಲಾ ವಿರುದ್ಧ 224ರನ್ಗಳ ಐತಿಹಾಸ ಗೆಲುವು ಸಾಧಿಸಿತು. ಮೊದಲ ಇನ್ನಿಂಗ್ಸ್ನಲ್ಲಿ 5 ಮತ್ತು ಸೆಕೆಂಡ್ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಿತ್ತ ಕ್ಯಾಪ್ಟನ್ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
ಬಾಂಗ್ಲಾ ವಿರುದ್ಧ ಐತಿಹಾಸಿಕ ಟೆಸ್ಟ್ ಜಯ ದಾಖಲಿಸಿದ ಅಫ್ಘಾನಿಸ್ತಾನ..!
TRENDING ARTICLES