ತಿರುವನಂತಪುರಂ : ಸಂಜು ಸ್ಯಾಮ್ಸನ್.. ಬಹುಶಃ ಈ ಹೆಸ್ರನ್ನು ಕೇಳಿರ್ತೀರಿ. ಭಾರತದ ಯುವ ಕ್ರಿಕೆಟಿಗ ಟೀಮ್ ಇಂಡಿಯಾ ಪ್ರವೇಶಿ, ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ರೆಡಿಯಾಗಿರುವ ಯಂಗ್ ಸ್ಟಾರ್..! ಐಪಿಎಲ್ ನೋಡೋರಿಗಂತೂ ಸಂಜು ಗೊತ್ತೇ ಇರುತ್ತೆ. ಭರವಸೆಯ ಯುವ ಕ್ರಿಕೆಟಿಗ ಸಂಜು ಮಾನವೀಯತೆ ಮೆರೆದಿದ್ದಾರೆ.
ತನ್ನ ಸಂಭಾವನೆಯನ್ನು ಮೈದಾನದ ಸಿಬ್ಬಂದಿಗೆ ನೀಡಿದ್ದಾರೆ ಸಂಜು..! ಭಾರತ ಎ ತಂಡ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ನಡುವೆ ನಡೆದ 5 ಮ್ಯಾಚ್ಗಳ ಅನಧಿಕೃತ ಒಡಿಐ ಸರಣಿಯನ್ನು ಭಾರತ 4-1 ಅಂತರದಿಂದ ಜಯಸಿದೆ,
ಕೇರಳದಲ್ಲಿ ನಡೆದ ಮ್ಯಾಚ್ಗಳಿಗೆ ಮಳೆ ಅಡ್ಡಿಯಾಗಿತ್ತು. ಆಗ ಕೆಲವು ಓವರ್ಗಳನ್ನು ಕಡಿತ ಮಾಡಲಾಗಿತ್ತು. ಮ್ಯಾಚ್ಗಳಿಗೆ ಮಳೆ ಅಡ್ಡಿ ಪಡಿಸಿದಾಗ ಸಿಬ್ಬಂದಿ ಉತ್ತಮ ಕೆಲಸ ನಿರ್ವಹಿಸಿದ್ದರು. ಇದನ್ನು ಮೆಚ್ಚಿದ ಸಂಜು ಸ್ಯಾಮ್ಸನ್ ಗ್ರೀನ್ ಫೀಲ್ಡ್ ಮೈದಾನದ ಸಿಬ್ಬಂದಿಗೆ ತನಗೆ ಸಿಕ್ಕ 1.5 ಲಕ್ಷ ರೂಗಳನ್ನು ನೀಡಿದ್ದಾರೆ. ಸಂಜು ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೈದಾನದ ಸಿಬ್ಬಂದಿಗೆ ಸಂಭಾವನೆ ದಾನ ಮಾಡಿದ ಸಂಜು ಸ್ಯಾಮ್ಸನ್..!
TRENDING ARTICLES