ಕೊಲಂಬೋ : ಅಂಡರ್ 19 ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅರ್ಜುನ್ ಆಜಾದ್ ಮತ್ತು ತಿಲಕ್ ವರ್ಮಾರ ಭರ್ಜರಿ ಸೆಂಚುರಿ ನೆರವಿನಿಂದ 60ರನ್ಗಳ ಅಧಿಕಾರಯುತ ಗೆಲುವು ಸಾಧಿಸಿದೆ.
ಶ್ರೀಲಂಕಾದ ಮೊರಾತುವಾದ ತೈರೊನ್ನೆ ಫೆರ್ನಾಂಡೋ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅರ್ಜುನ್ (121), ತಿಲಕ್ (110) ಶತಕದಿಂದ ಭಾರತ 9 ವಿಕೆಟ್ ಕಳೆದುಕೊಂಡು 305ರನ್ ಮಾಡಿತು. ಅರ್ಜುನ್ ಮತ್ತು ತಿಲಕ್ ಅಲ್ಲದೆ ಶಾಶ್ವತ್ ರಾವತ್ 18, ಅಥರ್ವ ಅಂಕೋಲೆಕರ್ 16, ಧೃವ್ ಜುರೇಲ್ 10ರನ್ ಕೊಡುಗೆ ನೀಡಿದರು.
ಗುರಿ ಬೆನ್ನತ್ತಿದ್ದ ಪಾಕಿಸ್ತಾನ ರೊಹೈಲ್ ನಜೀರ್ ಶತಕದ ಹೊರತಾಗಿಯೂ ಸೋಲುಂಡಿತು. ನಜೀರ್ (117) ಮೊಹಮ್ಮದ್ ಹ್ಯಾರಿಸ್ (43) ಹೋರಾಟದ ನಡುವೆಯೂ 46.4 ಓವರ್ ಮಾತ್ರ ಬ್ಯಾಟ್ ಮಾಡಲು ಶಕ್ತವಾಗಿ 245ರನ್ಗಳಿಗೆ ಆಲ್ಔಟ್ ಆಯಿತು. ಇದರೊಂದಿಗೆ ಭಾರತ ಗೆದ್ದು ಬೀಗಿತು.
ಅಂಡರ್ 19 ಏಷ್ಯಾಕಪ್ : ಪಾಕ್ ವಿರುದ್ಧ ಸೆಂಚುರಿ ಸಿಡಿಸಿದ ಅರ್ಜುನ್, ತಿಲಕ್..!
TRENDING ARTICLES