Sunday, November 24, 2024

ಯಾರಿಗೂ ಗೊತ್ತಿರದ ‘ನಿಷ್ಕರ್ಷ’ ತೆರೆ ಹಿಂದಿನ ಸ್ಟೋರಿ..!

ನಿಷ್ಕರ್ಷ..1993ರಲ್ಲಿ ತೆರೆಕಂಡ ಸ್ಯಾಂಡಲ್​ವುಡ್​ನ ಸೂಪರ್ ಹಿಟ್ ಸಿನಿಮಾ. ಸಾಹಸ ಸಿಂಹ ವಿಷ್ಣುವರ್ಧನ್ ಎಟಿಎಸ್​​​ ಕಮಾಂಡೋ ಆಗಿ ಮಿಂಚಿದ್ದ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದವರು ಡೈರೆಕ್ಷರ್ ಸುನೀಲ್ ಕುಮಾರ್ ದೇಸಾಯಿ. ಬಿ.ಸಿ ಪಾಟೀಲ್ ನಿರ್ಮಾಣದ ಚೊಚ್ಚಲ ಸಿನಿಮಾ ಕೂಡ ಇದೇ ನಿಷ್ಕರ್ಷ.. ವಿಷ್ಣುದಾದ – ದೇಸಾಯಿ ಮತ್ತು ಬಿ.ಸಿ ಪಾಟೀಲ್ ಕಾಂಬಿನೇಷನ್​ನ ಈ ಚಿತ್ರ ಭಾರೀ ಸದ್ದು ಮಾಡಿತ್ತು.

ಬ್ಯಾಂಕ್ ದರೋಡೆ  ಕುರಿತ ನಿಷ್ಕರ್ಷ  ಆ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲೊಂದು ವಿಭಿನ್ನ ಪ್ರಯೋಗ. ನಿರೀಕ್ಷೆಗೂ ಮೀರಿದ ಯಶಸ್ಸು ಸಿನಿಮಾಕ್ಕೆ ಸಿಕ್ಕಿತ್ತು. ಈಗ ಮತ್ತೆ ನಿಷ್ಕರ್ಷ ರಿಲೀಸ್ ಆಗುತ್ತಿದ್ದು, ಸಿನಿಮಾ ಬಗ್ಗೆ ಡೈರೆಕ್ಟರ್ ಸುನೀಲ್​ ಕುಮಾರ್ ದೇಸಾಯಿ ಒಂದಿಷ್ಟು ಇಂಟ್ರೆಂಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪೊಲೀಸ್​ ಡಿಪಾರ್ಟ್​ಮೆಂಟ್​ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುವಂಥಾ ಮೂವಿ ಮಾಡ್ಬೇಕು ಅಂತ ಬಿ.ಸಿ ಪಾಟೀಲ್​ ಅವರಲ್ಲೊಂದು ಆಸೆ, ಮಹಾ ಕನಸಿತ್ತು. ಆ ಕನಸಿಗೆ ನೀರೆರೆಯಲು ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ಸಾಥ್ ನೀಡಿದ್ರು. ಆಗ ಬ್ಯಾಂಕ್​ ರಾಬರಿ ಕಥೆ ಹುಟ್ಟಿತು..! ಅದೇ ನಿಷ್ಕರ್ಷ ಸಿನಿಮಾವಾಯ್ತು.. ವಿಷ್ಣುವರ್ಧನ್ ಎಟಿಎಸ್​​​ ಕಮಾಂಡೋ ಪಾತ್ರದಲ್ಲಿ ನಟಿಸಲು ಗ್ರೀನ್​ ಸಿಗ್ನಲ್​ ಕೊಟ್ರು. ಅನಂತ್ ನಾಗ್ ಪೊಲೀಸ್​ ಕಮಿಷನರ್​ ಪಾತ್ರದಲ್ಲಿ ನಟಿಸಿದ್ರು.

ವಿಲನ್ ಪಾತ್ರಕ್ಕೆ ಪ್ರೊಡ್ಯೂಸರ್, ನಟ ಬಿ.ಸಿ ಪಾಟೀಲ್​ ಅವ್ರೇ ರೆಡಿಯಾದ್ರು..! ಆರಂಭದಲ್ಲಿ ಮೀಸೆ ತೆಗೆಯೋಕೆ ಪಾಟೀಲ್ ನಿರಾಕರಿಸಿದ್ರು. ಬಟ್ ವೈಟ್ ಕಾಲರ್ ವಿಲನ್ ಪಾತ್ರ ಕಥೆಗೆ ಅಗತ್ಯವಿದ್ದಿದ್ದರಿಂದ ಮೀಸೆಗೆ ಬ್ಲೇಡ್ ಹಾಕಿ… ಹೊಸ ಲುಕ್​ ನಲ್ಲಿ ಕಾಣಿಸಿಕೊಂಡ್ರು ‘ಕೌರವ’..!

ಹೀಗೆ ಯಾವ ಪಾತ್ರಕ್ಕೆ ಯಾರು.. ಅವರ ಗೆಟಪ್ ಏನು ಅನ್ನೋದು ಕ್ಲಿಯರ್ ಏನೋ ಆಯ್ತು… ಆಮೇಲೆ ಎದುರಾಗಿದ್ದು.. ಯಾವ ಬಿಲ್ಡಿಂಗ್​ ಅನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳೋದು ಅಂತ..! ಶೂಟಿಂಗ್ ಗೆ ದೊಡ್ಡ ಕಟ್ಟಡ ಹುಡುಕಾಟದಲ್ಲಿದ್ದ ನಿಷ್ಕರ್ಷ ಟೀಮ್​ಗೆ ಸಿಕ್ಕಿದ್ದು ಎಂಜಿ ರಸ್ತೆಯಲ್ಲಿನ ಮಣಿಪಾಲ್ ಸೆಂಟರ್..!

ಬಳಿಕ ಕಬ್ಬನ್​ ಪಾರ್ಕ್​​ ಬಳಿಯ ಮಯೂರ ಹೋಟೆಲ್​ನಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಸಿನಿಮಾ ಸೆಟ್ಟೇರಿಯೇ ಬಿಡ್ತು. ಶೇ.75ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿತ್ತು.  ಡೇ & ನೈಟ್ ಶೂಟಿಂಗ್ ಮಾಡ್ತಿದ್ದರಿಂದ ಟ್ರಾಫಿಕ್​ ಜಾಮ್ ಆಗಿ, ಅಕ್ಕ-ಪಕ್ಕದ ಅಂಗಡಿಯವರಿಗೆ ತೊಂದ್ರೆ ಆಗ್ತಿತ್ತು. ಅಂಗಡಿ ಮಾಲೀಕರು ಕೋರ್ಟ್​ನಿಂದ ಚಿತ್ರೀಕರಣಕ್ಕೆ ತಡೆ ತಂದ್ರು.. ಚಿತ್ರತಂಡ ಕೋರ್ಟ್-ಕಚೇರಿ ಅಂತ ಸುತ್ತಿ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದು.. ಅಂತೂ ಇಂತೂ ಶೂಟಿಂಗ್ ಕಂಪ್ಲೀಟ್ ಮಾಡ್ತು.

ವಿಷ್ಣುವರ್ಧನ್ ಅವರ ಶೂಟಿಂಗ್ ಕೂಡ ಕೇವಲ ಹದಿನಾರೇ ದಿನಕ್ಕೆ ಮುಗಿದಿತ್ತು. ಅವರು 3-4 ಗಂಟೆಗಳಲ್ಲೇ ಡಬ್ಬಿಂಗ್ ಕೂಡ ಮುಗಿಸಿಕೊಟ್ಟಿದ್ರು. ನೋಡು ನೋಡುತ್ತಿದ್ದಂತೆ ಪೋಸ್ಟ್ ಪ್ರೊಡಕ್ಷನ್ ವರ್ಕ್​ ಕೂಡ ಕಂಪ್ಲೀಟ್ ಆಯ್ತು. ಸಿನಿಮಾ ರಿಲೀಸ್​ ಗೆ ರೆಡಿಯಾಯ್ತು..

ಸಂತೋಷ್​ ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್ ಮಾಡ್ಬೇಕು ಅನ್ನೋ ಆಸೆ ಚಿತ್ರತಂಡಕ್ಕಿತ್ತು. ಆದ್ರೆ, ಥಿಯೇಟರ್ ಮ್ಯಾನೇಜ್ಮೆಂಟ್​ನವ್ರು ಥಿಯೇಟರ್ ಕೊಡೋಕೆ ಹಿಂದೇಟು ಹಾಕಿದ್ರು. ಆದ್ರೆ ಅವರ ಒಪ್ಪಿಗೇ ಇಲ್ಲದೇ ಸಿನಿತಂಡ ಥಿಯೇಟರ್ ಅನೌನ್ಸ್ ಮಾಡಿತು.. ಆಮೇಲೆ ಕಿರಿಕಿರಿ ನಡುವೆಯೂ ಸಂತೋಷ್ ಥಿಯೇಟರ್​ನಲ್ಲೇ ನಿಷ್ಕರ್ಷ ರಿಲೀಸ್ ಆಗಿ 56 ದಿನಗಳ ಯಶಸ್ವಿ ಪ್ರದರ್ಶನ ಕಂಡಿತು.

ಅದೇ ಟೈಮ್​ನಲ್ಲಿ ನರ್ತಕಿ ಥಿಯೇಟರ್​ನಲ್ಲಿ ರಾಜ್​ಕುಮಾರ್ ಅಭಿನಯದ ಒಡಹುಟ್ಟಿದವರು ಮೂವಿ ರಿಲೀಸ್ ಆಯ್ತು. ರಾಜ್ ಮತ್ತು ವಿಷ್ಣು ಸಿನಿಮಾಗಳು ಅಕ್ಕಪಕ್ಕವೇ ಇದ್ರೆ ಅಭಿಮಾನಿಗಳಲ್ಲಿ ಗಲಾಟೆ ಆಗ್ಬಹುದು ಅಂತ ಸಂತೋಷ್​ ಥಿಯೇಟರ್ನಿಂದ ನಿಷ್ಕರ್ಷ ಸಿನಿಮಾವನ್ನು ತೆಗೆದ್ರು. ಬಳಿಕ ನಿಷ್ಕರ್ಷ ತ್ರಿವೇಣಿ ಥಿಯೇಟರ್​ಗೆ ಶಿಫ್ಟ್ ಆಯ್ತು, ಅಲ್ಲೂ ಕೂಡ ಯಶಸ್ವಿ ಪ್ರದರ್ಶನ ಕಾಣ್ತು.

ಚಿತ್ರ ರಿಲೀಸ್​ಗೆ ಮುಂಚೆ ಅರ್ಧಬಂರ್ಧ ಕಥೆ ಕೇಳಿದ್ದ ಒಂದಿಷ್ಟು ಜನ ಈ ಸಿನಿಮಾ ಈ ಕಾಲಘಟ್ಟಕ್ಕೆ ಒಪ್ಪಲ್ಲ. ಇದು ಇನ್ನು 25 ವರ್ಷಗಳ ಬಳಿಕ ರಿಲೀಸ್ ಆಗ್ಬೇಕು ಅಂತ ಟೀಕೆ ಮಾಡಿದ್ದರು. ಆದ್ರೆ ಚಿತ್ರ ರಿಲೀಸ್ ಆದ್ಮೇಲೆ ಟೀಕೆ ಮಾಡಿದ ಮಂದಿ ನಿಬ್ಬೆರಗಾದ್ರು. ಚಿತ್ರ ಗೆದ್ದಿತು. ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿತು.

 ಇನ್ನು ನಿಷ್ಕರ್ಷ ಆಗಿನ ಕಾಲದಲ್ಲೇ 60 ಲಕ್ಷ ಬಜೆಟ್​ನಲ್ಲಿ ನಿರ್ಮಾಣವಾಗಿತ್ತು. ವಿಷ್ಣು ಅವರಿಗೆ 7.5 ಲಕ್ಷ ರೂ ಫಿಕ್ಸ್ ಆಗಿತ್ತು. ಸಿನಿಮಾಕ್ಕೆ ಹೆಚ್ಚು ಖರ್ಚಾಗಿದೆ ಅಂತ ಅವರು 6.5 ಲಕ್ಷ ರೂಗಳನ್ನು ಮಾತ್ರ ಪಡೆದಿದ್ದರಂತೆ. ಈ ಎಲ್ಲಾ ವಿಷಯಗಳನ್ನು ಸ್ವತಃ ಸುನೀಲ್ ಕುಮಾರ್ ದೇಸಾಯಿ ಅವರೇ ಹಂಚಿಕೊಂಡಿದ್ದಾರೆ.

ನಿಷ್ಕರ್ಷ ರಿಲೀಸ್ ಆಗಿ 25 ವರ್ಷವಾಗಿದ್ದು, ಈ ಸಂದರ್ಭದಲ್ಲಿ ಚಿತ್ರ ರಿ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ ಜನ್ಮದಿನದ ನೆನಪು. ಸೆಪ್ಟೆಂಬರ್ 20ರ ಶುಕ್ರವಾರ 100 ಥಿಯೇಟರ್ ಗಳಲ್ಲಿ ‘ನಿಷ್ಕರ್ಷ’ ತೆರೆಕಾಣುತ್ತಿದೆ.

 

RELATED ARTICLES

Related Articles

TRENDING ARTICLES