ಬೆಂಗಳೂರು : ನಮ್ಮಲ್ಲಿ ಬಹುತೇಕರು ರೂಲ್ಸ್ ಇರುವುದೇ ಬ್ರೇಕ್ ಮಾಡೋದಕ್ಕೆ ಅನ್ನೋ ಮನಸ್ಥಿತಿಯಲ್ಲಿದ್ದಾರೆ. ನಿಯಮಗಳ ಉಲ್ಲಂಘನೆ ಬಹು ದೊಡ್ಡ ಸಾಧನೆ ಅಂತ ಪೋಸ್ ಕೊಡೋರಿಗೇನು ಕಮ್ಮಿ ಇಲ್ಲ..! ಆದರೆ, ಈಗ ಅಪ್ಪಿ-ತಪ್ಪಿಯೂ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ತೆರಬೇಕಾಗುತ್ತೆ..! ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಜೇಬಲ್ಲಿ, ಬ್ಯಾಂಕ್ ಅಕೌಂಟ್ನಲ್ಲಿ ಸಾಕಷ್ಟು ದುಡ್ಡು ಇಟ್ಕೊಳ್ಳಿ..!
ಹೌದು, ದೇಶಾದ್ಯಂತ ಇಂದಿನಿಂದಲೇ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರಲಾಗಿದೆ. ಟ್ರಾಫಿಕ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದ್ದು, ಪ್ರತಿಯೊಂದು ನಿಯಮ ಉಲ್ಲಂಘನೆಗೆ ಈ ಹಿಂದಿಗಿಂತಲೂ ಹೆಚ್ಚು ದಂಡ ಕಟ್ಟ ಬೇಕಾಗುತ್ತದೆ.
ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಅನೇಕರು ನಿಯಮ ಪಾಲಿಸುತ್ತಿರಲಿಲ್ಲ. ಅಕಸ್ಮಾತ್ ಪೊಲೀಸರು ಹಿಡಿದ್ರೆ 100 ರೂ ದಂಡ ಕಟ್ಟಿ ಹೋಗೋಣ ಅಂತ ನಿಯಮ ಗಾಳಿಗೆ ತೂರುತ್ತಿದ್ದರು. ಈಗ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸದರೆ 1 ಸಾವಿರ ರೂ ದಂಡ ಮತ್ತು 3 ತಿಂಗಳು ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಹೀಗೆ ಪ್ರತಿಯೊಂದು ನಿಯಮ ಉಲ್ಲಂಘನೆಗೂ ಭಾರೀ ದಂಡ ತೆರಬೇಕಾಗಿದ್ದು, ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಎನ್ನುವುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಪಟ್ಟಿ.
ನಿಯಮಗಳ ವಿವರ ಹಳೆಯ ದಂಡ (ರೂಗಳಲ್ಲಿ) ಹೊಸದಂಡ (ರೂಗಳಲ್ಲಿ)
ಲೈಸೆನ್ಸ್ ಇಲ್ಲದ ವಾಹನ ಚಾಲನೆ 500 5,000
ಲೈಸೆನ್ಸ್ ತಿರಸ್ಕೃತಗೊಂಡಿದ್ದರೂ ಚಾಲನೆ 500 10,000
ವೇಗದ ಚಾಲನೆ 400 1,000 (ಲಘು ವಾಹನ) 2000 (ಮಧ್ಯಮ ಪ್ರಯಾಣಿಕರ ವಾಹನ)
ಮದ್ಯ ಸೇವಿಸಿ ಚಾಲನೆ 2,000 10,000
ಹೆಲ್ಮೆಟ್ ಧರಿಸದಿದ್ದರೆ 100 1,000, 3 ತಿಂಗಳ ಲೈಸೆನ್ಸ್ ರದ್ದು
ಸೀಟ್ ಬೆಲ್ಟ್ ಹಾಕದಿರುವುದು 100 1,000
ನಿಗದಿಗಿಂತ ಹೆಚ್ಚು ಜನರನ್ನು ಕರೆದೊಯ್ಯುವುದು – 1,000
ತುರ್ತುಸೇವೆ ವಾಹನಗಳಿಗೆ ದಾರಿ ಬಿಡದಿರುವುದು – 10,000
ಇನ್ಷುರೆನ್ಸ್ ಇಲ್ಲದೆ ವಾಹನ ಚಾಲನೆ 1,000 2,000
ದ್ವಿಚಕ್ರ ವಾಹನದಲ್ಲಿ ಹೆಚ್ಚು ಜನರನ್ನು ಕರೆದೊಯ್ಯುವುದು 100 2,000, 3 ತಿಂಗಳವರೆಗೆ ಲೈಸೆನ್ಸ್ ರದ್ದು