ಕೊಲಂಬೊ: ಕೇರಂ ಬಾಲ್ ಸ್ಪಿನರ್ ಖ್ಯಾತಿಯ ಶ್ರೀಲಂಕಾದ ಕ್ರಿಕೆಟಿಗ ಅಜಂತಾ ಮೆಂಡಿಸ್ ತಮ್ಮ ಕ್ರಿಕೆಟ್ ಕೆರಿಯರ್ಗೆ ಗುಡ್ ಬೈ ಹೇಳಿದ್ದಾರೆ.
ವಿಶ್ವ ಕ್ರಿಕೆಟ್ಗೆ ಕೇರಂ ಬಾಲ್ ಎಸೆತವನ್ನು ಪರಿಚಯಿಸಿದ್ದ ಅಜಂತಾ ಮೆಂಡಿಸ್ ತಮ್ಮ ವಿಭಿನ್ನ ಸ್ಟೈಲ್ ಬೌಲಿಂಗ್ ಮೂಲಕ ಗಮನಸೆಳೆದಿದ್ರು. 2008 ಏಪ್ರಿಲ್ನಲ್ಲಿ ವಿಂಡೀಸ್ ವಿರುದ್ಧ ಏಕದಿನ ಪಂದ್ಯದ ಮೂಲಕ ವರ್ಲ್ಡ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಅವರು, ಪದಾರ್ಪಣೆ ಪಂದ್ಯದಲ್ಲೇ 39 ರನ್ಗೆ 3 ವಿಕೆಟ್ ಪಡೆದಿದ್ರು. ಆದರೆ, ಅವರ ನಿಜವಾದ ಪ್ರತಿಭೆ ಸಾಬೀತಾಗಿದ್ದು ಬಳಿಕ ನಡೆದ ಏಷ್ಯಾಕಪ್ನಲ್ಲಿ. ಕರಾಚಿಯಲ್ಲಿ ನಡೆದ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತದ ಘಟಾನುಘಟಿ ಬ್ಯಾಟ್ಸ್ಮನ್ಗಳು ಮೆಂಡಿಸ್ ಬೌಲಿಂಗ್ ಎದುರು ಪತರುಗುಟ್ಟಿದ್ರು. ಕೇವಲ 13 ರನ್ ನೀಡಿ 6 ವಿಕೆಟ್ಗಳನ್ನು ಕಬಳಿಸಿದ್ದ ಅವರು ಶ್ರೀಲಂಕಾಕ್ಕೆ ಏಷ್ಯಾ ಕಪ್ ತಂದುಕೊಟ್ರು.
ಟೆಸ್ಟ್ ಕ್ರಿಕೆಟ್ನಲ್ಲೂ ಅದ್ಭುತ ಸಾಧನೆ ಮಾಡಿರುವ ಅಜಂತಾ ಮೆಂಡಿಸ್ ಭಾರತದ ವಿರುದ್ಧವೇ ತನ್ನ ಮೊದಲ ಟೆಸ್ಟ್ ಆಡಿದ್ರು. ಫಸ್ಟ್ ಮ್ಯಾಚ್ನಲ್ಲೇ 8 ವಿಕೆಟ್ ಪಡೆದ ಅವರು 3 ಪಂದ್ಯಗಳ ಸರಣಿಯಲ್ಲಿ ಬರೋಬ್ಬರಿ 26 ವಿಕೆಟ್ಗಳನ್ನು ಪಡೆದಿದ್ರು. ಅಷ್ಟೇ ಅಲ್ಲದೇ, ಶ್ರಿಲಂಕಾ ಸರಣಿ ಜಯಿಸುವಲ್ಲಿ ನೆರವಾದ್ರು. ಇನ್ನು ಟಿ-20 ಕ್ರಿಕೆಟ್ನಲ್ಲಂತೂ ಅವರ ಕೈಚಳಕ ಗಮನಾರ್ಹ. ಅಜಂತಾ ಮೆಂಡಿಸ್ ಟಿ-20 ಫಾರ್ಮೆಟ್ನಲ್ಲಿ ಎರಡು ಬಾರಿ 6 ವಿಕೆಟ್ಗಳ ಗೊಂಚಲನ್ನು ಪಡೆದ ಏಕೈಕ ಆಟಗಾರಾಗಿದ್ದಾರೆ. ಇನ್ನು ಅವರು ತನ್ನ ಕೊನೆಯ ಪಂದ್ಯವನ್ನು 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ರು. ಒಡಿಐಯಲ್ಲಿ 87 ಮ್ಯಾಚ್ನಲ್ಲಿ 152 ವಿಕೆಟ್ಸ್, 39 ಟಿ-20ಯಲ್ಲಿ 66 ವಿಕೆಟ್ ಹಾಗೂ 19 ಟೆಸ್ಟ್ ಮ್ಯಾಚ್ಗಳಲ್ಲಿ 70 ವಿಕೆಟ್ಗಳನ್ನು ಪಡೆದಿದ್ದಾರೆ.