ಆ್ಯಂಟಿಗುವಾ: ಪ್ರವಾಸಿ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸಿದೆ. ಟಿ.20, ಒಡಿಐ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ, ಇದೀಗ ಸರ್ ವಿವಿಯನ್ ರಿಚರ್ಡ್ಸನ್ ಸ್ಟೇಡಿಯಾಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಒಂದು ದಿನ ಬಾಕಿ ಉಳಿದಿರುವಂತೇ 318 ರನ್ಗಳ ಬೃಹತ್ ಅಂತರದಿಂದ ಗೆದ್ದು 1-0 ಮುನ್ನಡೆ ಸಾಧಿಸಿದೆ.
ಪ್ರಥಮ ಇನ್ನಿಂಗ್ಸ್ನಲ್ಲಿ 75 ರನ್ಗಳ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್ನಲ್ಲಿ ಅಜಿಂಕ್ಯಾ ರಹಾನೆ(102)ರವರ ಆಕರ್ಷಕ ಶತಕ ಹಾಗೂ ಹನುಮ ವಿಹಾರಿ(93) ಮತ್ತು ನಾಯಕ ವಿರಾಟ್ ಕೊಹ್ಲಿ(51)ಯವರ ಅರ್ಧಶತಕದ ನೆರವಿನಿಂದ 7 ವಿಕೆಟ್ಗೆ 343 ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಹೀಗಾಗಿ ಒಟ್ಟು 419 ರನ್ಗಳ ಗೆಲುವಿನ ಗುರಿ ಪಡೆದ ವೆಸ್ಟ್ ಇಂಡೀಸ್ ಜಸ್ಪ್ರೀತ್ ಬೂಮ್ರಾರ ಮಾರಕ ದಾಳಿಗೆ ನಲುಗಿ ಕೇವಲ 100 ರನ್ನಿಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಅಷ್ಟೇನು ಯಶ ಕಾಣದ ಬೂಮ್ರಾ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೆರೆಬಿಯನ್ ಬ್ಯಾಟ್ಸ್ಮನ್ಸ್ಗಳಿಗೆ ಸಿಂಹಸ್ವಪ್ನರಾದ್ರು. 8 ಓವರ್ಗಳನ್ನು ಎಸೆದ ಬೂಮ್ರಾ ಕೇವಲ 7 ರನ್ ನೀಡಿ 5 ವಿಕೆಟ್ ಕಿತ್ತರು. ಇನ್ನು ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಗಳಿಸಿದ್ದ ಇಶಾಂತ್ ಶರ್ಮಾ ನಿನ್ನೆಯೂ 3 ವಿಕೆಟ್ಗಳನ್ನು ಪಡೆದರೆ, ಶಮಿ 2 ವಿಕೆಟ್ ಪಡೆದು ಅವರಿಗೆ ಸಾಥ್ ನೀಡಿದ್ರು.
ಅಜಿಂಕ್ಯಾ ರಹಾನೆ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.ಈ ಗೆಲುವಿನ ಮೂಲಕ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ನಲ್ಲಿ ಶುಭಾರಂಭ ಮಾಡಿತ್ತಲ್ಲದೇ, 60 ಅಂಕಗಳನ್ನು ಕೂಡ ಪಡೆಯಿತು.