ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ ವಿಧಿವಶರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಯ್ಯ ಹೆಗ್ಡೆಯವರು ಕೋಮಾಕ್ಕೆ ಜಾರಿದ್ದರು. ಮೈಸೂರಿನ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ತಮ್ಮ ಪುತ್ರ ಸಿದ್ಧಾರ್ಥ್ ಸಾವಿನ ಸುದ್ದಿ ಕೂಡ ತಿಳಿದಿರಲಿಲ್ಲ. ಚಿಕಿತ್ಸೆ ಫಲಿಸದೆ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ.
ಜುಲೈ 29ರಂದು ಸಿದ್ಧಾರ್ಥ್ ಮೃತಪಟ್ಟಿದ್ದರು. ಅವರ ಸಾವನ್ನಪ್ಪಿ ಒಂದು ತಿಂಗಳು ಆಗುವ ಮುನ್ನವೇ ಗಂಗಯ್ಯ ಹೆಗ್ಡೆ ವಿಧಿವಶರಾಗಿದ್ದಾರೆ.