Saturday, January 11, 2025

222 ರನ್ನಿಗೆ ಆಲೌಟಾದ ವೆಸ್ಟ್​​ ಇಂಡೀಸ್​; ಟೀಮ್​​ ಇಂಡಿಯಾಗೆ 75 ರನ್​ ಮುನ್ನಡೆ

ಆ್ಯಂಟಿಗುವಾ: ಪ್ರವಾಸಿ ಭಾರತ ತಂಡ ಆತಿಥೇಯ ವೆಸ್ಟ್​​ ಇಂಡೀಸ್​ ತಂಡವನ್ನು ಮೊದಲ ಟೆಸ್ಟ್​​​ನ ಪ್ರಥಮ ಇನ್ನಿಂಗ್ಸ್​​ನಲ್ಲಿ 222 ರನ್ನಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು. ಮೊದಲು ಬ್ಯಾಟಿಂಗ್​​ ಮಾಡಿ 297 ರನ್​ ಗಳಿಸಿದ್ದ ಟೀಮ್​ ಇಂಡಿಯಾ ಪ್ರಥಮ ಇನ್ನಿಂಗ್ಸ್​​​ನಲ್ಲಿ 75 ರನ್​​ಗಳ ಮುನ್ನಡೆಯನ್ನು ಪಡೆದಿದೆ.

ಎರಡನೇ ದಿನವಾದ ಶುಕ್ರವಾರ ಬ್ಯಾಟಿಂಗ್​ ಆರಂಭಿಸಿದ್ದ ಕೆರಿಬಿಯನ್ನರು, ಇಶಾಂತ್​ ಶರ್ಮಾರ ಮಾರಕ ಬೌಲಿಂಗ್​ಗೆ ತತ್ತರಿಸಿ 56 ಓವರಿಗೆ 8 ವಿಕೆಟ್​​ಗಳನ್ನು ಕಳೆದುಕೊಂಡು 188 ರನ್​ಗಳನ್ನು ಪೇರಿಸಿದ್ರು. ಇಂದು ವೆಸ್ಟ್​​ ಇಂಡೀಸ್​​ನ ಉಳಿದ 2 ವಿಕೆಟ್​​ಗಳನ್ನು ಬೇಗನೇ ಉರುಳಿಸುವ ಲೆಕ್ಕಾಚಾರ ಕೊಹ್ಲಿ ಪಡೆಯದಾಗಿತ್ತು. ಆದ್ರೆ 3ನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಕ್ಯಾಪ್ಟನ್​ ಜೇಸನ್​​ ಹೋಲ್ಡರ್​ ಮತ್ತು ಕಮ್ಮಿನ್ಸ್​​​ ಅವರು ಟೀಮ್​ ಇಂಡಿಯಾ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ್ರು. ಭಾರತೀಯ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ್ದ ಅವರು 74 ಓವರಿನವೆರಗೂ ಕ್ರೀಸ್​​​ ಕಾಯ್ದುಕೊಂಡ್ರು. 65 ಎಸೆತಗಳಿಗೆ 39 ರನ್​​ ಗಳಿಸಿ ಶಮಿ ಓವರಿನಲ್ಲಿ ಜೇಸನ್​​​ ಹೋಲ್ಡರ್​​​ ಕೀಪರ್​​ ರಿಷಬ್​​ ಪಂತ್​ಗೆ ಕ್ಯಾಚ್ ನೀಡಿದ್ರೆ, 45 ಎಸೆತಗಳನ್ನು ಎದುರಿಸಿ ಖಾತೆಯನ್ನೇ ತೆರೆಯದ ಮಿಗಲ್​ ಕಮ್ಮಿನ್ಸ್​​ ಅಂತಿಮವಾಗಿ ರವೀಂದ್ರ ಜಡೇಜರಿಗೆ ವಿಕೆಟ್​​ ಒಪ್ಪಿಸಿದ್ರು. ಇನ್ನು ಕೊನೆಯವರಾಗಿ ಬ್ಯಾಟಿಂಗ್​​ಗೆ ಇಳಿದ ಗ್ಯಾಬ್ರಿಯಲ್​​ 5 ರನ್​ ಗಳಿಸಿ ಅಜೇಯರಾಗುಳಿದ್ರು. ಅಂತಿಮವಾಗಿ ನಿನ್ನೆಯ ಮೊತ್ತಕ್ಕೆ 34 ರನ್​​ ಸೇರಿಸಿದ ವೆಸ್ಟ್​​ ಇಂಡೀಸ್​​ 222 ರನ್ನಿಗೆ ತನ್ನ ಮೊದಲ ಇನ್ನಿಂಗ್ಸ್​​ಗೆ ತೆರೆ ಎಳೆಯಿತು. ಇನ್ನು ಭಾರತದ ಪರ ಇಶಾಂತ್​ ಶರ್ಮಾ 5 ವಿಕೆಟ್​​ಗಳನ್ನು ಪಡೆದು ಮಿಂಚಿದ್ರೆ, ಶಮಿ, ಜಡೇಜಾ ತಲಾ 2 ಹಾಗೂ ಬೂಮ್ರಾ 1 ವಿಕೆಟ್​​ ಪಡೆದ್ರು.

ಇನ್ನು ತನ್ನ ಎರಡನೇ ಇನ್ನಿಂಗ್ಸ್​​ ಆರಂಭಿಸಿರುವ ಟೀಮ್​​ ಇಂಡಿಯಾ​​​ ಊಟದ ವಿರಾಮದ ವೇಳೆಗೆ ವಿಕೆಟ್​​ ನಷ್ಟವಿಲ್ಲದೆ 14 ರನ್​ ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES