ಆ್ಯಂಟಿಗುವಾ : ಕೆರಾನ್ ರೋಚ್ ಮತ್ತು ಗಬ್ರಿಲ್ ದಾಳಿಗೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪೆರೇಡ್ ಮಾಡಿದರು. ಇದರಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 297ರನ್ಗಳಿಗೆ ಆಲ್ಔಟ್ ಆಗಿದೆ.
ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಿನ್ನೆಯಿಂದ ಆರಂಭವಾಗಿರುವ ಮೊದಲ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 297ರನ್ಗಳನ್ನಷ್ಟೇ ಗಳಿಸಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ರೋಚ್ ದಾಳಿಗೆ ನಲುಗಿತು. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ (44)ಅ ಜಿಂಕ್ಯಾ ರಹಾನೆ (81) ತಂಡಕ್ಕೆ ಚೇತರಿಕೆ ನೀಡಿದ್ರು. ನಂತರ ಆಲ್ ರೌಂಡರ್ ಹನುಮ ವಿಹಾರಿ (32) ಮತ್ತು ರವೀಂದ್ರ ಜಡೇಜಾ (58) ನೆಲಕಚ್ಚಿ ಆಡಿದ್ದು ಬಿಟ್ಟರೆ ಬೇರ್ಯಾವ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳೀಲಿಲ್ಲ. ಸದ್ಯ ಎರಡನೇ ದಿನದ ಆಟ ನಡೆಯುತ್ತಿದ್ದು, ಭಾರತದ ಮೊದಲ ಇನ್ನಿಂಗ್ಸ್ ಮುಗಿದಿದೆ.
ರೋಚ್, ಗಬ್ರಿಲ್ ಮಾರಕ ದಾಳಿ – 297ರನ್ಗಳಿಗೆ ಭಾರತ ಆಲ್ಔಟ್..!
TRENDING ARTICLES