ನವದೆಹಲಿ: ಪ್ರವಾಸಿ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇಂದು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನಾಡಲಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆಯಾಟದಲ್ಲಿ 27 ರನ್ನುಗಳು ಬಂದ್ರೆ ಅದು ವಿಶ್ವದಾಖಲೆಗೆ ಕಾರಣವಾಗಲಿದೆ.
ಹೌದು. ವೆಸ್ಟ್ ಇಂಡೀಸ್ ವಿರುದ್ಧ ಈ ಜೋಡಿ ಈವರೆಗೆ 973 ರನ್ಗಳನ್ನು ಕಲೆಹಾಕಿದೆ. ಇಂದಿನ ಪಂದ್ಯದಲ್ಲಿ ಕೇವಲ 27 ರನ್ನ್ಗಳು ಕೊಹ್ಲಿ-ರೋಹಿತ್ ಜತೆಯಾಟದಲ್ಲಿ ದಾಖಲಾದ್ರೆ, ಏಕದಿನ ಮಾದರಿಯಲ್ಲಿ ಕೆರಿಬಿಯನ್ ತಂಡದ ವಿರುದ್ಧ 1000 ರನ್ ಜತೆಯಾಟವಾಡಿದ ವಿಶ್ವದ ಮೊದಲ ಜೋಡಿ ಎಂಬ ಸಾಧನೆಗೆ ಭಾಜನವಾಗಲಿದೆ.