Saturday, January 11, 2025

  ಕ್ರಿಸ್​​ ಗೇಲ್​ನಿಂದ ಲಾರಾ ದಾಖಲೆ ಬ್ರೇಕ್​

ಟ್ರಿನಿಡಾಡ್​: ಪ್ರವಾಸಿ ಭಾರತ ವಿರುದ್ಧ ನಿನ್ನೆ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಯೂನಿವರ್ಸಲ್​ ಬಾಸ್​ ಖ್ಯಾತಿಯ ವೆಸ್ಟ್​​ ಇಂಡೀಸ್​​ ಆರಂಭಿಕ ದಾಂಡಿಗ ಕ್ರಿಸ್​ ಗೇಲ್​ ಮಹತ್ತರವಾದ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಈ ಮೂಲಕ ವೆಸ್ಟ್​​ ಇಂಡೀಸ್​​​ ಲೆಜೆಂಡ್​​ ಆಟಗಾರ ಬ್ರಿಯಾನ್​ ಲಾರಾ ಅವರ ದಾಖಲೆಯನ್ನು ಮುರ್ದಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ 11 ರನ್​ ಗಳಿಸಿದ ಗೇಲ್​, ವೆಸ್ಟ್​​ ಇಂಡೀಸ್​ ಪರ ಅತೀ ಹೆಚ್ಚು ರನ್​​ ಗಳಿಸಿದ ಆಟಗಾರನೆನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಬ್ರಿಯಾನ್​ ಲಾರಾ ಅವರ ಹೆಸರಿನಲ್ಲಿತ್ತು. ಇದೀಗ ಕ್ರಿಸ್​ ಗೇಲ್​ 10353 ರನ್​ಗಳಿಸುವ ಮೂಲಕ ಅವರ ದಾಖಲೆಯನ್ನು ಅಳಿಸಿದ್ದಾರೆ.

ಇನ್ನು ಗೇಲ್​ ಈವರೆಗೆ ಒಟ್ಟು 297 ಪಂದ್ಯಗಳನ್ನಾಡಿದ್ದು ವೆಸ್ಟ್​​ ಇಂಡೀಸ್​​ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ಅಟಗಾರನೆನಿಸಿಕೊಂಡಿದ್ದಾರೆ. ಜೊತೆಗೆ 25 ಶತಕಗಳನ್ನು ಸಿಡಿಸಿರುವ ಗೇಲ್, ಅತಿ ಹೆಚ್ಚು ಶತಕ ಸಿಡಿಸಿರುವ ವಿಂಡೀಸ್​​ನ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

 

RELATED ARTICLES

Related Articles

TRENDING ARTICLES