ಟ್ರಿನಿಡಾ: ಟೀಂ ಇಂಡಿಯಾ ಕ್ಯಾಪ್ಟನ್, ರನ್ ಮೆಶಿನ್ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಈ ಮೂಲಕ 26 ವರ್ಷದ ಹಳೆಯ ದಾಖಲೆಯೊಂದು ಧೂಳಿಪಟವಾಗಿದೆ.
ಟ್ರಿನಿಡಾದ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 19 ರನ್ ಗಳಿಸುತ್ತಿದ್ದಂತೇ, ಕೆರಿಬಿಯನ್ ವಿರುದ್ಧ ಅವರ ಒಟ್ಟು ಗಳಿಕೆ 1931 ರನ್ಗಳಾಗಿದ್ದು ಹೀಗಾಗಿ ಅತೀ ಹೆಚ್ಚು ರನ್ ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ 34ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆಯನ್ನು ಮೆರೆದಿದ್ದು ಇಂಡೀಸ್ ವಿರುದ್ಧ ಅವರು 7 ಶತಕ, 10ಅರ್ಧ ಶತಕ ಸಿಡಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ವಿಂಡೀಸ್ ವಿರುದ್ಧ 64 ಇನ್ನಿಂಗ್ಸ್ಗಳಲ್ಲಿ 1 ಶತಕದೊಂದಿಗೆ 1930 ರನ್ಗಳಿಸಿದ್ದರು. ಈವರೆಗೆ ಅವರ ಸಾಧನೆಯನ್ನು ಯಾವೊಬ್ಬ ಆಟಗಾರನಿಗೂ ಸಾಧ್ಯವಾಗಿರಲಿಲ್ಲ. ಇದೀಗ ವಿರಾಟ್ ಕೊಹ್ಲಿ ಈ ಸಾಧನೆಯನ್ನು ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.