ಕೊಪ್ಪಳ : ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೊಂಗಾ ಬಿದ್ದ ಪ್ರಕರಣ ಇದೀಗ ಕಾಲುವೆ ರಿಪೇರಿ ಕಾಮಗಾರಿ ಆರಂಭವಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ ಬಳಿಯ ಎಡದಂಡೆ ಕಾಲುವೆಯಲ್ಲಿ (31 ಮೈಲ್ 1715 ಚೈನ್ 23ನೇ ಡಿಸ್ಟಪುಟರ್) ನಿನ್ನೆ ಬೊಂಗಾ ಬಿದ್ದು ಅಪಾರ ಪ್ರಮಾಣದ ನೀರು ಪೋಲಾಗುತಿತ್ತು. ಅಷ್ಟೇ ಅಲ್ಲದೆ ಪಕ್ಕದಲ್ಲೆ ಇದ್ದ ಸೇತುವೆ ಕುಸಿಯುವ ಆತಂಕ ಕೂಡ ಗ್ರಾಮಸ್ಥರನ್ನು ಭಯ ಭೀತಿಗೊಳಿಸಿತ್ತು. ಈ ಬಗ್ಗೆ ನಿನ್ನೆ ಪವರ್ ಟಿವಿ ವರದಿ ಮಾಡಿದ ಬೆನ್ನಲ್ಲೆ ವಿಷಯ ತಿಳಿದ ತುಂಗಭದ್ರಾ ಆಡಳಿತ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದುರಸ್ತಿ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ದತೆ ಕೈಗೊಂಡಿದ್ದರು. ಆದ್ರೆ ಕಾಲುವೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಕ್ಯೂ ಸೆಕ್ ನೀರು ಹರಿಯುತ್ತಿರುವುದರಿಂದ ದುರಸ್ತಿ ಕಾಮಗಾರಿ ಮಾಡುವುದಕ್ಕೆ ವಿಳಂಬವಾಯ್ತು. ಕಾಲುವೆಯ ನೀರು ಸಂಪೂರ್ಣ ಖಾಲಿ ಆಗೋದಕ್ಕೆ ಸುಮಾರು ೧೦ ರಿಂದ ೧೨ ಗಂಟೆ ಕಾಲಾವಕಾಶ ಬೇಕಾಗಿತ್ತು. ಇದೀಗ ಕಾಲುವೆಯಲ್ಲಿ ಸಂಪೂರ್ಣ ನೀರು ಖಾಲಿ ಆದ ಕಾರಣ ಇಂದು ಮುಂಜಾನೆಯಿಂದಾನೆ ದುರಸ್ತಿ ಕಾಮಗಾರಿ ಭರದಿಂದ ಸಾಗಿದೆ. ಮೂರು ಜೆ.ಸಿ.ಬಿ ಗಳು ನಿರಂತರ ಕಾರ್ಯನಿರ್ವಹಿಸುತ್ತಿವೆ. ಇನ್ನೂ ನಿನ್ನೆಯಿಂದ ತುಂಗಭದ್ರಾ ಆಡಳಿತ ಮಂಡಳಿ ಅಧಿಕಾರಿಗಳು ಸ್ಥಳದಲ್ಲೆ ಇದ್ದು ಕಾಮಗಾರಿ ಶೀಘ್ರವಾಗಿ ನೆಡಸಲು ಪ್ರಯತ್ನಿಸುತ್ತಿದ್ದಾರೆ. ಸುಮಾರು ೪೮ ಗಂಟೆಗಳ ಕಾಲ ದುರಸ್ತಿ ಕಾಮಗಾರಿ ನಡೆಯುವ ಸಂಭವವಿದ್ದು ಕಾಮಗಾರಿಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನಿನ್ನೆಯಿಂದಾನೆ ಮಾಡಿಕೊಳ್ಳಲಾಗಿದೆ.