ಪ್ಲೋರಿಡಾ : ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ಯಾಪ್ಟನ್ ಕೊಹ್ಲಿಯ ದಾಖಲೆಯೊಂದನ್ನು ಬ್ರೇಕ್ ಮಾಡಿದ್ದಾರೆ. ಇತ್ತೀಚೆಗೆ ಒಂದೊಂದೇ ದಾಖಲೆಗಳನ್ನು ನಿರ್ಮಿಸುತ್ತಿರುವ ರೋಹಿತ್ ಶರ್ಮಾ ಇಂದು ಎರಡು ರೆಕಾರ್ಡ್ಗಳನ್ನು ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿನ ಮ್ಯಾಚ್ನಲ್ಲಿ 3 ಸಿಕ್ಸರ್ ಸಿಡಿಸುವ ಮೂಲಕ ಟಿ20ಐನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ನಂಬರ್ 1 ಪಟ್ಟಕ್ಕೇರಿದ ರೋಹಿತ್ ಅರ್ಧಶತಕದೊಂದಿಗೆ ನಾಯಕ ಕೊಹ್ಲಿಯ ರೆಕಾರ್ಡನ್ನು ಉಡೀಸ್ ಮಾಡಿದ್ದಾರೆ.
ಇಂಟರ್ನ್ಯಾಷನಲ್ ಟಿ20ಯಲ್ಲಿ ಅತೀ ಹೆಚ್ಚು 50+ರನ್ ಮಾಡಿದ ಬ್ಯಾಟ್ಸ್ಮನ್ ಅನ್ನೋ ಕೀರ್ತಿಗೆ ಹಿಟ್ ಮ್ಯಾನ್ ಪಾತ್ರರಾಗಿದ್ದಾರೆ. ಇಂದಿನ ಮ್ಯಾಚ್ಗೂ ಮುನ್ನ 50+ ಗಳಿಸಿದವರ ಪಟ್ಟಿಯಲ್ಲಿ ರೋಹಿತ್ ಮತ್ತು ವಿರಾಟ್ ಸಮ ಸ್ಥಾನದಲ್ಲಿದ್ದರು. ಇಂದು 17ನೇ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ ಕೊಹ್ಲಿಯನ್ನು ಬೀಟ್ ಮಾಡಿ ನಂಬರ್ 1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ವಿರಾಟ್ ಕೊಹ್ಲಿ 20 ಅರ್ಧಶಕತಗಳೊಂದಿಗೆ ಈ ಪಟ್ಟಿಯಲ್ಲಿ 2 ಸ್ಥಾನದಲ್ಲಿದ್ದಾರೆ. 4 ಸೆಂಚುರಿ ಹಾಗೂ 17 ಹಾಫ್ ಸೆಂಚುರಿ ಸೇರಿದಂತೆ ಒಟ್ಟು 21 50+ ಇನ್ನಿಂಗ್ಸ್ ಕಟ್ಟಿರುವ ರೋಹಿತ್ ಶರ್ಮಾ ವಿರಾಟನ್ನು ಹಿಂದಿಕ್ಕಿದ್ದಾರೆ.
ಡಬಲ್ ಸೆಂಚುರಿ ಸ್ಟಾರ್ ಈಗ ಸಿಕ್ಸರ್ ಕಿಂಗ್ – ರೋಹಿತ್ ಶರ್ಮಾ ವಿಶ್ವ ದಾಖಲೆ..!