ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯ ಜನರಿಗೆ ಆಮ್ ಆದ್ಮಿ ಸರ್ಕಾರ ಬಹಳ ಖುಷಿಯ ಸುದ್ದಿಕೊಟ್ಟಿದೆ. ಉಚಿತ ವಿದ್ಯುತ್ ನೀಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದೆ.
ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಕೇಜ್ರಿವಾಲ್ ಸರ್ಕಾರ ದೆಹಲಿ ಜನರನ್ನು ಸೆಳೆಯಲು ಒಂದರ ಮೇಲೊಂದು ಗಿಫ್ಟ್ ನೀಡುತ್ತಿದೆ. ಇತ್ತೀಚೆಗಷ್ಟೇ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದ ಕೇಜ್ರಿವಾಲ್, ಈಗ ಫ್ರೀ ಕರೆಂಟ್ ನೀಡುವ ಮೂಲಕ ಅಲ್ಲಿನ ಜನರಿಗೆ ಎಲೆಕ್ಷನ್ ಗಿಫ್ಟ್ ನೀಡಿದ್ದಾರೆ. ದೆಹಲಿಯಲ್ಲಿ ಇನ್ಮುಂದೆ 200 ಯೂನಿಟ್‌ವರೆಗೆ ವಿದ್ಯುತ್ ಬಿಲ್ ಇರುವುದಿಲ್ಲ, 201ರಿಂದ 400 ಯೂನಿಟ್‌ವರೆಗೆ ಕೇವಲ ಅರ್ಧದಷ್ಟು ಬಿಲ್ ಮಾತ್ರ ಪಾವತಿ ಮಾಡಬೇಕು. ಮಧ್ಯಮ ವರ್ಗದ ಜನ, ಉದ್ಯಮಿಗಳು, ಸಣ್ಣ ಕೈಗಾರಿಕೆ ಉದ್ಯಮಿಗಳನ್ನು ಸೆಳೆಯಲು ಕೇಜ್ರಿವಾಲ್ ಸರ್ಕಾರ ಈ ಕಸರತ್ತು ನಡೆಸುತ್ತಿದೆ ಎನ್ನಲಾಗುತ್ತಿದೆ.