Sunday, October 27, 2024

ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮತ್ತೆ ಐವರು ಶಾಸಕರು..!

ಬೆಂಗಳೂರು: ಸ್ಪೀಕರ್​ ರಮೇಶ್​ ಕುಮಾರ್​ ವಿರುದ್ಧ ಮತ್ತೆ ಐವರು ಶಾಸಕರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ. ಅತೃಪ್ತ ಶಾಸಕರ ಈ ನಿರ್ಧಾರ ದೋಸ್ತಿಗಳಿಗೆ ಶಾಕ್​ ನೀಡಿದೆ.
ಕಳೆದ ಕೆಲದಿನಗಳಿಂದ ರಾಜ್ಯ ರಾಜಕೀಯದಲ್ಲಿ ಹಲವು ಹೈಡ್ರಾಮಗಳು ನಡೆಯುತ್ತಿವೆ. ಮೈತ್ರಿ ಪಕ್ಷದ 17 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ಆತಂಕದಲ್ಲಿದೆ. ದೋಸ್ತಿ ಪಕ್ಷಗಳ ನಾಯಕರು ಅತೃಪ್ತ ಶಾಸಕರನ್ನು ಮನವೊಲಿಸಿ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಈ ಹಿಂದೆ ರಾಜೀನಾಮೆಯನ್ನು ಅಂಗೀಕರಿಸದ ಸ್ಪೀಕರ್​ ವಿರುದ್ಧ 10 ಜನ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಅದರ ಬೆನ್ನಲ್ಲೇ ಸ್ಪೀಕರ್ ಹಾಗೂ ಸರ್ಕಾರ ಕೂಡ ಸುಪ್ರೀಂಗೆ ಅರ್ಜಿಸಲ್ಲಿಸಿದ್ದರು. ಶುಕ್ರವಾರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡುವಂತೆ, ಅಂದರೆ ಅತೃಪ್ತರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ, ಅನರ್ಹಗೊಳಿಸುವಂತೆಯೂ ಇಲ್ಲ ಅಂತ ಆದೇಶಿಸಿದೆ. 

ಇದೀಗ ಮತ್ತೆ ಐವರು ಶಾಸಕರು ಸ್ಪೀಕರ್​ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಸುಪ್ರೀಂ ಮೊರೆ ಹೋಗಿದ್ದಾರೆ. ಎಂಟಿಬಿ ನಾಗರಾಜ್​ , ರೋಷನ್ ಬೇಗ್ , ಡಾ. ಸುಧಾಕರ್, ಮುನ್ನಿರತ್ನ ಮತ್ತು ಆನಂದ್ ಸಿಂಗ್ ಸ್ಪೀಕರ್​ ವಿರುದ್ಧ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ ಶಾಸಕರಾಗಿದ್ದಾರೆ. ಜುಲೈ 17 ರಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಹೀಗಾಗಿ ಅತೃಪ್ತ ಶಾಸಕರನ್ನು ಮನವೊಲಿಸಲು ಹರಸಾಹಸ ಪಡ್ತಿದ್ದ ಮೈತ್ರಿ ನಾಯಕರಿಗೆ ಐವರು ರೆಬೆಲ್​ ಶಾಸಕರ ಈ ನಿರ್ಧಾರ ಬಿಗ್​ ಶಾಕ್​ ನೀಡಿದೆ.

RELATED ARTICLES

Related Articles

TRENDING ARTICLES