ಬೆಂಗಳೂರು: IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತು ಗೊಂಡಿರುವ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರ ಸ್ಥಾನಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಕೆ.ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ.
ವಿಜಯ್ ಶಂಕರ್ ಅವರನ್ನು ಐಎಂಎ ಕಂಪನಿಗೆ ಕ್ಲೀನ್ಚೀಟ್ ನೀಡಿರುವ ಆರೋಪದ ಮೇಲೆ ಎಸ್ಐಟಿ ಬಂಧಿಸಿದೆ. ಜೊತೆಗೆ ಸೇವೆಯಿಂದ ಅಮಾನತುಗೊಂಡಿದ್ದಾರೆ.