ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2019-20 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಸತತ 2 ಗಂಟೆ 5 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡಿದ್ರು. ಇಂದಿರಾ ಗಾಂಧಿ ಅವರ ನಂತ್ರ ಬಜೆಟ್ ಮಂಡಿಸಿದ ಎರಡನೇ ನಾಯಕಿ ಅನ್ನುವ ಕೀರ್ತಿಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ.
ಮೋದಿ 2.O ಬಜೆಟ್ ಮುಖ್ಯಾಂಶಗಳು:
*ನಾರಿ ನೀ ನಾರಾಯಣಿ ಯೋಜನೆ ಮೂಲಕ ಮಹಿಳೆಯರ ಸಬಲೀಕರಣ. ಮುದ್ರಾ ಯೋಜನೆಯಡಿಯಲ್ಲಿ ಮಹಿಳೆಯರಿಗೆ 1 ಲಕ್ಷ ರೂ ಸಾಲ. ಜನ್ಧನ್ ಖಾತೆಗಳಿಂದ 5 ಸಾವಿರ ರೂ. ಒಡಿ ನೀಡಲು ನಿರ್ಧಾರ. ಲಿಂಗ ತಾರತಮ್ಯ ನಿವಾರಣೆಗೆ ಹೊಸ ಯೋಜನೆ, ಸ್ಟ್ಯಾಂಡ್ ಅಪ್ ಯೋಜನೆಯಡಿ SC/ST ಮಹಿಳೆಯರಿಗೆ ಸಾಲ ಸೌಲಭ್ಯ.
*ಬ್ಯಾಂಕಿಂಗ್ ವಲಯ ಸುಧಾರಣೆಗೆ ಭಾರಿ ಒತ್ತು. ಸಾರ್ವಜನಿಕ ಬ್ಯಾಂಕ್‌ಗಳಿಗೆ 70 ಸಾವಿರ ಕೋಟಿ ರೂ. ಬಂಡವಾಳ. ಬ್ಯಾಂಕ್ಗಳಿಂದ 1 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿ ವಶಕ್ಕೆ.
* ಚಿನ್ನ ದುಬಾರಿ: ಚಿನ್ನದ ಮೇಲಿನ ತೆರಿಗೆ ಶೇ. 10-12.5ಕ್ಕೆ ಏರಿಕೆ.
* ಪೆಟ್ರೋಲ್, ಡಿಸೇಲ್ ಲೀಟರ್‌ಗೆ 1 ರೂ. ಸೆಸ್ ಏರಿಕೆ.
*7 ಲಕ್ಷ ರೂ. ಗೃಹಸಾಲಕ್ಕೆ 15 ವರ್ಷಗಳವರೆಗೆ ತೆರಿಗೆ ಇಲ್ಲ. ಕಟ್ಟಡ ಬಾಡಿಗೆ ಕಾನೂನಿನಲ್ಲಿ ಭಾರಿ ಬದಲಾವಣೆ. ವಿದೇಶಗಳ ಮಾದರಿಯಲ್ಲಿ ಬಾಡಿಗೆ ಮನೆ ವಾಸಕ್ಕೆ ಆದ್ಯತೆ. ಇದಕ್ಕಾಗಿ ಸರ್ಚಾರ್ಜ್ ಮುಕ್ತ ತೆರಿಗೆ. ಗೃಹ ನಿರ್ಮಾಣದ ಮೂಲಸೌಲಭ್ಯದ ಅಭಿವೃದ್ಧಿಗಾಗಿ 100 ಲಕ್ಷ ಕೋಟಿ ರೂ.
*ಒಂದೇ ದೇಶ, ಒಂದೇ ತೆರಿಗೆ, ಒಂದೇ ಮಾರ್ಕೆಟ್ ಜಾರಿ. 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ. 400 ಕೋಟಿ ವಹಿವಾಟು ಇರುವ ಕಂಪನಿಗಳಿಗೆ ಶೇ. 25ರಷ್ಟು ತೆರಿಗೆ. ಒಟ್ಟು ಜಿಡಿಪಿಯ ಶೇ. 5ರಷ್ಟು ವಿದೇಶಿ ಸಾಲ.
*ಕಳೆದ 2 ವರ್ಷಗಳಲ್ಲಿ ನೇರ ತೆರಿಗೆಯಲ್ಲಿ ಭಾರಿ ಏರಿಕೆ. 11.37 ಲಕ್ಷ ಕೋಟಿ ರೂ. ನೇರ ತೆರಿಗೆಯಲ್ಲಿ ಏರಿಕೆಯಾಗಿದೆ. NPAಯಡಿ 4 ಲಕ್ಷ ಕೋಟಿ ರೂ. ವಸೂಲಿ ಮಾಡಲಾಗಿದೆ.ದೇಶದ ವಿದೇಶಿ ಸಾಲ ಇತರೆ ದೇಶಗಳಿಗಿಂತ ಕಡಿಮೆಯಿದೆ.
*ಡಿಜಿಟಲ್ ಪಾವತಿಗೆ ಯಾವುದೇ ರೀತಿಯ ಶುಲ್ಕ ಇಲ್ಲ. 1 ಕೋಟಿ ರೂ. ನಗದು ವಿತ್‌ಡ್ರಾ ಮಾಡಿದ್ರೆ ಶೇ.2ರಷ್ಟು ಟಿಡಿಎಸ್. ತೆರಿಗೆ ಪಾವತಿ ವೇಳೆ ಪಾನ್ ಕಾರ್ಡ್ ಕಡ್ಡಾಯವಲ್ಲ. ಇನ್ಮುಂದೆ ಆಧಾರ್ ಕಾರ್ಡ್ನಲ್ಲೂ ತೆರಿಗೆ ಪಾವತಿಸಬಹುದು.
*ಹೂಡಿಕೆದಾರರಿಗೆ KYC ನಿಯಯಗಳ ಸರಳೀಕರಣ. ಇನ್ಶೂರೆನ್ಸ್ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ಬಂಡವಾಳ.ISRO ಸಂಶೋಧನೆಗಳಿಂದ ಬಂಡವಾಳ ಆಕರ್ಷಿಸಲು ಅನುಮತಿ.
*ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ. ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೂ ನೀರು ಪೂರೈಕೆ. ರೈತರಿಗಾಗಿಯೂ ಉದ್ದಿಮೆಗಳಲ್ಲಿ ಸರಳೀಕರಣ. ಕೃಷಿಕರಿಗೆ ಸೂಕ್ತ ಬೆಲೆ, ಮಾರುಕಟ್ಟೆ ವ್ಯವಸ್ಥೆ.
*10 ಲಕ್ಷ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ. ನವೋದ್ಯಮಗಳಿಗಾಗಿ ಪ್ರತ್ಯೇಕವಾಗಿ ಟಿವಿ ಕಾರ್ಯಕ್ರಮಗಳು. ಸ್ಟಾರ್ಟ್ ಅಪ್ ಯೋಜನೆಗಳ ಮಾಹಿತಿಗಾಗಿ ಟಿವಿ ವಾಹಿನಿ. ರೋಬೋಟಿಕ್ ತಂತ್ರಜ್ಞಾನಕ್ಕೆ ಆದ್ಯತೆ.
*ಸಣ್ಣ ಉದ್ದಿಮೆಗಳಿಗೆ 1 ಕೋಟಿ ರೂ. ವರೆಗೆ ಸಾಲ. ಸಣ್ಣ ಉದ್ದಿಮೆಗಳಿಗಾಗಿ 350 ಕೋಟಿ ರೂ. ಮೀಸಲು ಬಿದಿರು, ಖಾದಿ, ಜೇನು ಸಾಕಾಣಿಕೆ ಉದ್ಯಮಗಳಿಗೆ ಉತ್ತೇಜನ. ಗ್ರಾಮೀಣ ಕೃಷಿ ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ಕೆಲಸಗಳಿಗೆ ಉತ್ತೇಜನ.
*ಬ್ಯಾಟರಿ, ವಿದ್ಯುತ್ ಚಾಲಿತ ವಾಹನಗಳ ಉದ್ದಿಮೆಗೆ ಉತ್ತೇಜನ. ಎಲೆಕ್ಟ್ರಿಕ್ ವಾಹನ ಖರೀದಿಯಲ್ಲಿ ಶೇ. 7ರಷ್ಟು ತೆರಿಗೆ ವಿನಾಯ್ತಿ.
*60 ವರ್ಷ ಮೇಲ್ಪಟ್ಟ ನಾಗರಿಕರಿಗೆ 3 ಸಾವಿರ ರೂ. ಪಿಂಚಣಿ. ಅಟಲ್ ಪೆನ್ಷನ್, ನ್ಯಾಷನಲ್ ಪೆನ್ಷನ್ ಯೋಜನೆ PFRDI ಜೊತೆ ಸೇರ್ಪಡೆ.
*ಉಜ್ವಲ ಯೋಜನೆಯಡಿ LED ಬಲ್ಬ್‌ಗಳ ಬಳಕೆಗೆ ಉತ್ತೇಜನ. ಇದರಿಂದ ಪ್ರತಿ ವರ್ಷ 18 ಸಾವಿರ ಕೋಟಿ ಉಳಿತಾಯ.
*ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹಲವು ಯೋಜನೆಗಳು. ಶಿಕ್ಷಣದ ಅಭಿವೃದ್ಧಿಗೆ ರಾಷ್ಟ್ರೀಯ ಸಂಶೋಧನಾ ಫೌಂಡೇಶನ್. ಭಾರತದ 3 ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ. ಐಐಟಿ, ಐಐಎಂ, ಐಐಎಸ್ಸಿಗೆ 400 ಕೋ.ರೂ. ಅನುದಾನ.
*NRI ಗಳಿಗೆ ಆಧಾರ್, ಪಾಸ್‌ಪೋರ್ಟ್ ವಿತರಿಸಲು ನಿರ್ಧಾರ.
*1700 ನಗರಗಳು ಬಯಲುಶೌಚ ಮುಕ್ತವಾಗಿವೆ. 9.6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹಲವು ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಅಕ್ಟೋಬರ್ 2ರೊಳಗೆ ಬಯಲು ಬಹಿರ್ದೆಸೆ ಮುಕ್ತ ಭಾರತ ಗುರಿ.
*ನಾಗರಿಕ ವಿಮಾನಯಾನಕ್ಕೆ ಉತ್ತೇಜನಕಾರಿ ಯೋಜನೆಗಳು. ಉಡಾನ್ ಯೋಜನೆಯಿಂದ ಸಣ್ಣ ನಗರಗಳಿಗೂ ವಿಮಾನಯಾನ.
*1, 2, 5, 10, 20 ರೂಪಾಯಿ ಮುಖಬೆಲೆಯ ನಾಣ್ಯಗಳ ಚಲಾವಣೆ.
*ಏರ್ ಇಂಡಿಯಾದ ಖಾಸಗೀಕರಣಕ್ಕೆ ನಿರ್ಧಾರ.
*ಸಾರಿಗೆಗಾಗಿ ನೂತನ ರೂಪೆ ಕಾರ್ಡ್ ಜಾರಿ. ರಸ್ತೆ ಸಂಪರ್ಕ ಕಾಮಗಾರಿಗಳಿಗಾಗಿ 80 ಸಾವಿರ ಕೋಟಿ ನಿಗದಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 24 ಸಾವಿರ ಕೋಟಿ ಮೀಸಲು. ಶೇ. 97ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ಸೌಲಭ್ಯ. ಪಿಎಂ ಗ್ರಾಮಸಡಕ್ ಯೋಜನೆಯಡಿಯಲ್ಲಿ 5 ವರ್ಷಗಳಲ್ಲಿ 1,25,000 ಕಿ.ಮೀ. ರಸ್ತೆ ಅಭಿವೃದ್ಧಿ.
*300 ಕಿ.ಮೀ ಮೆಟ್ರೋ ರೈಲು ಮಾರ್ಗಕ್ಕೆ ಅನುಮೋದನೆ.
*ರೈಲ್ವೆಯ ಮೂಲಭೂತ ಸೌಲಭ್ಯಕ್ಕಾಗಿ 50 ಸಾವಿರ ಕೋಟಿ ರೂ. ಅಗತ್ಯವಿದೆ. 2030ರ ವರೆಗೆ ರೈಲ್ವೆಯ ವಿವಿಧ ಕಾಮಗಾರಿಗಳಿಗಾಗಿ ಮೀಸಲು.
ಒಂದೇ ದೇಶ ಒಂದೇ ಗ್ರಿಡ್ ಘೋಷಣೆ. ಈ ಮೂಲಕ ಎಲ್ಲಾ ರಾಜ್ಯಗಳಿಗೂ ಸಮಾನ ವಿದ್ಯುತ್ ಹಂಚಿಕೆ. 2022ರೊಳಗೆ ದೇಶದೆಲ್ಲೆಡೆಯೂ ವಿದ್ಯುತ್, ಗ್ಯಾಸ್ ಸಂಪರ್ಕ.
*ಪ್ರಧಾನಮಂತ್ರಿ ಕರ್ಮಯೋಗಿ ಮಾನಧನ್ ಯೋಜನೆ ಜಾರಿ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ.
*ಪಿ.ಎಂ. ಗ್ರಾಮೀಣ ಆವಾಸ್ ಯೋಜನೆಯಡಿಯಲ್ಲಿ 1.95 ಕೋಟಿ ಮನೆಗಳನ್ನು ಫಲಾನುಭವಿಗಳಿಗೆ ನೀಡಲು ನಿರ್ಧಾರ.
*ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 81 ಲಕ್ಷ ಮನೆ ನಿರ್ಮಾಣ. ಅದರಲ್ಲಿ 26 ಲಕ್ಷ ಮನೆ ಈಗಾಗಲೇ ಪೂರ್ಣಗೊಂಡಿವೆ.