ವರ್ಲ್ಡ್ಕಪ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂದು ಅತಿಥೇಯ ಇಂಗ್ಲೆಂಡ್ ಅನ್ನು ಎದುರಿಸಲು ಸಕಲ ಸನ್ನದ್ಧವಾಗಿದೆ.
ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಮ್ಯಾಚ್ನಲ್ಲಿ ಕೊಹ್ಲಿ ಬಾಯ್ಸ್ ನ್ಯೂ ಲುಕ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇಷ್ಟು ದಿನ ಬ್ಲೂ ಜೆರ್ಸಿಯಲ್ಲಿ ಕಣಕ್ಕೆ ಇಳಿಯುತ್ತಿದ್ದ ಟೀಮ್ ಇಂಡಿಯಾ ಇಂದು ಕೇಸರಿ ಜೆರ್ಸಿಯಲ್ಲಿ ಆಡಲಿದೆ.
ಜರ್ಸಿ ಬದಲಾಯಿಸಿದ್ದೇಕೆ? : ಹೌದು ಟೀಮ್ ಇಂಡಿಯಾ ಇಂದಿನ ಮ್ಯಾಚ್ನಲ್ಲಿ ತನ್ನ ಎಂದಿನ ನೀಲಿ ಬಣ್ಣದ ಜೆರ್ಸಿಯಲ್ಲಿ ಆಡುತ್ತಿಲ್ಲ. ಕೇಸರಿ ಬಣ್ಣದ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಒನ್ ಡೇ ಫಾರ್ ಚಿಲ್ಡ್ರನ್ ಅನ್ನೋ ಐಸಿಸಿ ವಿಶೇಷ ಅಭಿಯಾನಕ್ಕೆ ಭಾರತ ಕೈ ಜೋಡಿಸಿದ್ದು, ಇಂದಿನ ಮ್ಯಾಚ್ನಲ್ಲಿ ಬೇರೆ ಬಣ್ಣದ ಜೆರ್ಸಿಯಲ್ಲಿ ಆಡಲಿದೆ. ಅಭಿಯಾನದ ಹಿನ್ನೆಲೆಯಲ್ಲಿ ತಂಡಗಳು ಒಂದು ಮ್ಯಾಚನ್ನು ಬೇರೆ ಜೆರ್ಸಿಯಲ್ಲಿ ಆಡಬೇಕು. ಭಾರತ ಕೇಸರಿ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡಿದೆ. ಇಂದಿನ ಮ್ಯಾಚ್ನಲ್ಲಿ ಮಾತ್ರ ಭಾರತ ಈ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದು, ಮುಂದಿನ ಮ್ಯಾಚ್ಗಳಲ್ಲಿ ಎಂದಿನ ಬ್ಲೂ ಜೆರ್ಸಿಯಲ್ಲೇ ಮೈದಾನಕ್ಕೆ ಇಳಿಯಲಿದೆ.