ಮುಂಬೈ: 2011ರ ವರ್ಲ್ಡ್ಕಪ್ ಹೀರೊ ಯುವರಾಜ್ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಕ್ಯಾನ್ಸರ್ ನಡುವೆಯೂ 2011ರ ವಿಶ್ವಕಪ್ ನಲ್ಲಿ ಆಲ್ರೌಂಡ್ ಆಟವಾಡಿ ಸರಣಿ ಶ್ರೇಷ್ಠ ಗೌರವಕ್ಕೆ ಯುವಿ ಪಾತ್ರರಾಗಿದ್ದರು. ಕ್ಯಾನ್ಸರ್ನಿಂದ ಗುಣಮುಖರಾಗಿ ಟೀಮ್ ಇಂಡಿಯಾಕ್ಕೆ ಮರಳಿದರೂ ಹೆಚ್ಚಿನ ಅವಕಾಶಗಳು ಅವರಿಗೆ ಸಿಗಲಿಲ್ಲ. 2017ರ ಜೂನ್ 30ರಂದು ಒಡಿಐ ಯುವಿ ಭಾರತದ ಪರ ಆಡಿದ ಕೊನೆಯ ಮ್ಯಾಚ್.
37 ವರ್ಷದ ಯುವರಾಜ್ ಸಿಂಗ್ ಇಂದು ಮುಂಬೈನಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸಿದ್ದ ದಾಖಲೆಯನ್ನು ಯುವರಾಜ್ ಹೊಂದಿದ್ದಾರೆ. ಭಾರತದ ಪರ ಒಟ್ಟು 40 ಟೆಸ್ಟ್ ಪಂದ್ಯ, 304 ಒಡಿಐ, 58 ಟಿ20 ಇಂಟರ್ನ್ಯಾಷನಲ್ ಮ್ಯಾಚ್ಗಳಲ್ಲಿ ಯುವರಾಜ್ ಆಡಿದ್ದಾರೆ.
ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 1,900 ರನ್ ಮತ್ತು 9 ವಿಕೆಟ್, ಏಕದಿನ ಪಂದ್ಯಗಳಲ್ಲಿ ಒಟ್ಟು 8,701 ರನ್ ಮತ್ತು 111 ವಿಕೆಟ್, ಟಿ-20 ಪಂದ್ಯಗಳಲ್ಲಿ 1,177 ರನ್, 28 ವಿಕೆಟ್ ಪಡೆದಿದ್ದಾರೆ. 2007ರಲ್ಲಿ ವರ್ಲ್ಡ್ ಟಿ20ಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. 2011ರಲ್ಲಿ ವಿಶ್ವಕಪ್ ಗೆಲ್ಲಿಸಿ ಕೊಟ್ಟಿದ್ದ ಹಿರಿಮೆಯೂ ಯುವರಾಜ್ ಸಿಂಗ್ಗೆ ಸಲ್ಲುತ್ತದೆ.
ಸಿಕ್ಸರ್ ಸಿಂಗ್ ಅಂತಾನೇ ಫೇಮಸ್ಸಾಗಿರೋ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 6 ಬಾಲ್ಗೆ ಆರು ಸಿಕ್ಸ್ ಸಿಡಿಸಿ ಫೇಮಸ್ಸಾಗಿದ್ರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ನ ಮೊದಲ ಆವೃತ್ತಿಯಲ್ಲೇ ಯುವಿ ಆ ಸಾಧನೆ ಮಾಡಿದ್ರು. 2007ರ ಸೆಪ್ಟೆಂಬರ್ 19ರಂದು ಇಂಗ್ಲೆಂಡ್ ವಿರುದ್ಧ ಆರು ಬಾಲ್ಗೆ ಆರು ಸಿಕ್ಸರ್ ಸಿಡಿಸಿದ್ದ ಯುವ ಆಟದ ದೃಶ್ಯ ವೈಭವ ಕಣ್ಣಿಗೆ ಕಟ್ಟುವಂತಿದೆ.